ಇತರೆ

ಕಾಸರಗೋಡು ಜಿಲ್ಲೆಯ ಕ್ಷೇತ್ರ ಉತ್ಸವಗಳಿಗೆ ಸಿಡಿಮದ್ದು ಪೂರೈಸುತ್ತಿದ್ದ ಬದಿಯಡ್ಕದ “ಬೆಡಿ ಖಾದ್ರಿಚ್ಚ” ನಿಧನ

ಬದಿಯಡ್ಕ: ಹಲವಾರು ಕ್ಷೇತ್ರ ಉತ್ಸವಗಳಿಗೆ ಸಿಡಿಮದ್ದು ತಯಾರಿಸಿ ನೀಡುತ್ತಾ “ಬೆಡಿ ಖಾದ್ರಿಚ್ಚ” ಎಂದೇ ಜನಜನಿತರಾದ ಕೆ.ಎಂ.ಅಬ್ದುಲ್ ಖಾದರ್(70) ಇಂದು ಬೆಳಿಗ್ಗೆ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ಇವರನ್ನು ಮಂಗಳೂರು ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು.

ಸೋಹ ಮುಂತಾಸ್ ಮಂಜಿಲ್ ನಲ್ಲಿ ವಾಸಿಸುತ್ತಿದ್ದ ಇವರು ಬದಿಯಡ್ಕದ ಪೆರ್ಲ ರಸ್ತೆಯಲ್ಲಿ ಸಿಡಿಮದ್ದು ಪಟಾಕಿಗಳ ಅಂಗಡಿಗಳನ್ನು ತೆರೆದಿದ್ದರು. ಜಿಲ್ಲೆಯ ಹಲವಾರು ಪ್ರಸಿದ್ಧ ಕ್ಷೇತ್ರಗಳ ಉತ್ಸವ ಸಂದರ್ಭದಲ್ಲಿ ಪರಂಪರಾಗತವಾಗಿ ಸಿಡಿಮದ್ದು ಸಿಡಿಸುವ ವೃತ್ತಿಯನ್ನು ನಿರ್ವಹಿಸುತ್ತಿದ್ದ ಇವರು ಸರ್ವಧರ್ಮ ಸಮನ್ವತೆಗೆ ಪ್ರಾಧಾನ್ಯತೆ ನೀಡಿ ಎಲ್ಲಾ ಧರ್ಮಿಯರಲ್ಲೂ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದರು.

2022ರಲ್ಲಿ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ನಡೆದ ಶ್ರೀರುದ್ರ ಹೈಮಾವತೀ ಮಹಾ ಯಾಗದ ಸಂದರ್ಭದಲ್ಲಿ ಇವರನ್ನು ಎಡನೀರು ಮಠದ ಶ್ರೀಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸನ್ಮಾನಿಸಿದ್ದರು.

ಮೃತರು ಪತ್ನಿ ಸುಬೈದ, ಮಕ್ಕಳಾದ ಫೌಸಿಯ,ಇಖ್ಬಾಲ್ ಕಾಸಿಂ,ಬಲ್ಕೀಸ್,ಸೋಹ ಮುಂತಾಸ್, ಮೊಮ್ಮಕ್ಕಳಾದ ಇಬ್ರಾಹಿಂ,ಫೈರುಸ,ಮುಸ್ತಫ,ಅಮೀನ್.ಸಹೋದರ ಅಬ್ದುಲ್ ,ಆಯಿಷಾ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಬೆಳೆ ವಿಮೆ ಪರಿಹಾರದಲ್ಲಿ ಕಡಿತ: ರೈತರ ಅನುಮಾನಗಳಿಗೆ ಸರ್ಕಾರ ಸ್ಪಷ್ಟನೆ ನೀಡಲಿ–ಅರುಣ್ ಕುಮಾರ್ ಪುತ್ತಿಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವ…

8 hours ago

ಪುತ್ತೂರು: ‘ಸೇವಾ ಮೇರಾ ಯೋಗದಾನ್’: ಪ್ರಜ್ಞಾ ಆಶ್ರಮದ ದಿವ್ಯಾಂಗ ಮಕ್ಕಳಿಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಅನ್ನದಾನ..!

ಪ್ರಧಾನಿ ನರೇಂದ್ರ ಮೋದಿಯವರ 25ನೇ ವರ್ಷದ ಆಡಳಿತದ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ ‘ಸೇವಾ ಮೇರಾ ಯೋಗದಾನ್’ ಸೇವಾ ಕಾರ್ಯಕ್ರಮದ ಪ್ರಯುಕ್ತ…

9 hours ago

ಉಡುಪಿ: ಉಡುಪಿಯಲ್ಲಿ ಅ.11ರಂದು ‘ಮಹಿಷ ಮಹೋತ್ಸವ’; ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬ

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಸಹಭಾಗಿ ಸಂಘಟನೆಗಳ ಸಹಯೋಗದೊಂದಿಗೆ ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬ ‘ಮಹಿಷ ಮಹೋತ್ಸವ’ವನ್ನು ಅ.11ರಂದು…

9 hours ago

ಉಡುಪಿ: ಉಡುಪಿಯಲ್ಲಿ ಅ.10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ; ಒಂಟಿತನ, ಸಾಮಾಜಿಕ ಪ್ರತ್ಯೇಕತೆ ಅಪಾಯಕಾರಿ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಅ.10ರಂದು ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ…

9 hours ago

ಮಂಗಳೂರು: ಮಂಗಳೂರಿನ ಎ.ಜೆ. ತಾಂತ್ರಿಕ ಕಾಲೇಜಿನಲ್ಲಿ ಅ.8, 9ರಂದು ರಾಷ್ಟ್ರೀಯ ಮಟ್ಟದ ಹ್ಯಾಕಥಾನ್; ₹1 ಲಕ್ಷ ಬಹುಮಾನ

ನಗರದ ಎ.ಜೆ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗ ಹಾಗೂ ತರಬೇತಿ ಮತ್ತು ಉದ್ಯೋಗ ವಿಭಾಗದ ಸಹಯೋಗದಲ್ಲಿ…

9 hours ago

ಬಂಟ್ವಾಳ: ಫಾರಂ ನಂ.7 ದುರುಪಯೋಗ ಆರೋಪ; ಕ್ರಮಕ್ಕೆ ಒತ್ತಾಯಿಸಿ ತಹಶೀಲ್ದಾರ್‌ಗೆ ರಮಾನಾಥ ರೈ ಮನವಿ

ಅರ್ಹ ಹಾಗೂ ಮಾನ್ಯಗೊಂಡ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಅಳಿಸುವ ಉದ್ದೇಶದಿಂದ ಸುಳ್ಳು ಹಾಗೂ ಆಧಾರರಹಿತ ಫಾರಂ ನಂ.7…

9 hours ago