ಮೂಡಬಿದಿರೆ; ಮೂಡುಬಿದಿರೆಯ ಪಡುಮಾರ್ನಾಡು ಅಮನಬೆಟ್ಟು ನಿವಾಸಿ ಸುನಿಕ್ಷಾ ಪೂಜಾರಿ ನೃತ್ಯ, ಚಿತ್ರ ಬಿಡಿಸುವುದು, ಯಕ್ಷಗಾನ, ಕುಣಿತ ಭಜನೆ, ಸಂಗೀತ, ಭಜನೆ, ಭಾಷಣ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ.

ಸಂಗೀತವನ್ನು ಶ್ರೀಮತಿ ತುಳಸಿ ರಾಘವೇಂದ್ರ ಪೆಜತ್ತಾಯ ಇವರ ಹತ್ತಿರ ಕಲಿಯುತ್ತಿದ್ದು, ಮಹಮ್ಮಾಯಿ ಭಜನ ಮಂಡಳಿ ಕೋಟೆ ಬಾಗಿಲು ಮೂಡುಬಿದ್ರೆಯಲ್ಲಿ ಕುಣಿತ ಭಜನೆಯನ್ನು ಅಶೋಕ್ ನಾಯ್ಕ್ ಕಳಸಬೈಲು ಇವರಲ್ಲಿ ಕಲಿಯುತ್ತಿದ್ದಾರೆ. ಯಕ್ಷಗಾನವನ್ನು ಶಿವಕುಮಾರ್ ಸರ್ ಇವರ ಹತ್ತಿರ ಕಲಿಯುತ್ತಿದ್ದಾಳೆ. ಧರ್ಮಸ್ಥಳದವರು ಆಯೋಜಿಸಿದ ಯೋಗ ಶಿಬಿರದಲ್ಲಿ ಪಾಲ್ಗೊಂಡಿರುತ್ತಾಳೆ. ಇವಳು ಛದ್ಮವೇಶ, ಕಥೆ ಹೇಳುವುದು, ಜಾನಪದ ಹಾಡು, ಭಕ್ತಿ ಗೀತೆ ಮುಂತಾದರಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆ ಆಯೋಜಿಸಿದ ಮೂಡುಬಿದಿರೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 2022- 2023ನೇ ರಲ್ಲಿ ಕಥೆ ಹೇಳುವುದು ಪ್ರಥಮ ಸ್ಥಾನ ಪಡೆದಿರುತ್ತಾಳೆ. ಇವಳು ರಾಜ್ಯಮಟ್ಟದ ಕುಣಿತ ಭಜನೆ ಯಲ್ಲಿ ಭಾಗವಹಿಸಿರುತ್ತಾಳೆ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶಸ್ತಿಗಳನ್ನು ಮತ್ತು ಅಭಿನಂದನೆ ಪತ್ರಗಳು ಬಂದಿರುತ್ತದೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಮುಖ್ಯಸ್ಥರಾದ ಪದ್ಮಶ್ರೀ ಇವರ ನೇತೃತ್ವದಲ್ಲಿ ನಡೆದ ಹಲವಾರು ಕಡೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಅಭಿಮತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರತಿಭಾ ಲೋಕ ಹಾಗೂ ಪ್ರತಿಭಾ ಚುಕ್ಕಿಯಲ್ಲಿ ಭಾಗವಹಿಸಿದ್ದು. ಮೈಸೂರಿನಲ್ಲಿ ನಡೆದಂತಹ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಪುಟಾಣಿ ಪ್ರತಿಭೆ ಸುನಿಕ್ಷಾ ಪೂಜಾರಿಯವರು ಸುರೇಂದ್ರ ಸಿ ಪೂಜಾರಿ ಹಾಗೂ ಆಶಾ ಸುರೇಂದ್ರ ಪೂಜಾರಿ ದಂಪತಿಯ ಪುತ್ರಿಯಾಗಿದ್ದಾರೆ. ಪ್ರಸ್ತುತ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಅಲಂಗಾರಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.



