ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಭೌತ ವಿಜ್ಞಾನ ಸ್ಕೂಲ್ ವತಿಯಿಂದ ಹಿರಿಯ ವಿದ್ಯಾರ್ಥಿ ಮತ್ತು ಟೆಕ್ನೋಕ್ರಾಟ್ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕರ್ನಾಟಕ ಸರಕಾರದ ರಾಜ್ಯೋತ್ಸವ ಸಂದರ್ಭದಲ್ಲಿ ಸುವರ್ಣ ಸಂಭ್ರಮ ಪ್ರಶಸ್ತಿಯನ್ನು ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿಯನ್ನು ಕಾಲೇಜಿನ ಅಧ್ಯಾಪಕ ವರ್ಗ ಸಂಭ್ರಮದಿಂದ ಸನ್ಮಾನಿಸಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಕೂಡಾ ಆಯೋಜನೆಯಾಗಿತ್ತು. ರೆವೆರೆಂಡ್ ಫಾದರ್ ಮೆಲ್ವಿನ್ ಪಿಂಟೋ, ಉಪಕುಲಪತಿ ರೆವೆರೆಂಡ್ ಫಾದರ್ ಪ್ರವೀಣ್ ಮಾರ್ಟಿಸ್, ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರತ್,ಡಾ. ಆಲ್ವಿನ್ ಡೀಸಾ, ಸಹನಾ ದೇವಾಡಿಗ, ಡಾ. ಈಶ್ವರ ಭಟ್ ಈ ಸಂದರ್ಭ ಉಪಸ್ಥಿತರಿದ್ದರು.



