ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್, ಪುಂಜಾಲಕಟ್ಟೆ ಮತ್ತು ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರಿ ಸಂಘ ಪುಂಜಾಲಕಟ್ಟೆ ಇದರ ಸಹಭಾಗಿತ್ವದಲ್ಲಿ ಕೋಲಾರದಲ್ಲಿ ನಡೆದ ಅಂತರ್‌ಜಿಲ್ಲಾ ಮಟ್ಟದ ಜೂನಿಯರ್ ರಾಜ್ಯ ಕಬಡ್ಡಿ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ , ಮಹಿಳೆಯರ ವಿಭಾಗದಲ್ಲಿ ದ್ವಿತೀಯರಾಗಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳ ತಂಡವನ್ನು ಹಾಗೂ ಈ ತಂಡಗಳ ತರಭೇತುದಾರರಾದ ಹಬೀಬ್ ಹಾಗೂ ಚಂದ್ರಶೇಖರ್ ಕರ್ಣ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಭದ್ರಾ ಗ್ಯಾಸ್ ಮತ್ತು ಹೋಮ್ ಅಪ್ಲಾಯನ್ಸ್ ಮಡಂತ್ಯಾರು ಇದರ ಮಾಲಕರಾದ ಮಂಜುನಾಥ್ ಆಚಾರ್ಯ, ಪಿಲಾತಬೆಟ್ಟು ಸಹಕಾರಿ ಸಂಘದ ಅಧ್ಯಕ್ಷರಾದ ಯಂ.ತುಂಗಪ್ಪ ಬಂಗೇರ, ಉಪಾಧ್ಯಕ್ಷ ರವಿಶಂಕರ್ ಹೊಳ್ಳ, ನಿರ್ದೇಶಕರಾದ ಸರೋಜಿನಿ ಡಿ. ಶೆಟ್ಟಿ, ಶಶಿಧರ ನಾಯ್ಕ , ಪ್ರಭಾಕರ ಪಿ.ಯಂ. ಸ್ವಸ್ತಿಕ್ ಸಂಚಾಲಕರಾದ ಅಬ್ದುಲ್ ಹಮೀದ್, ಸ್ವಸ್ತಿಕ್ ಮಾಜಿ ಅಧ್ಯಕ್ಷ ಯಂ. ಮಾಧವ ಬಂಗೇರ, ರತ್ನಾಕರ ಕಾರ್ಯದರ್ಶಿ ಶ್ರೀಮತಿ ಬಬಿತ, ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲರಾದ ಸಂತೋಷ್ ಸನಿಲ್ ಹಾಗೂ ಲೋಕೇಶ್ ಆಚಾರ್ಯ, ಪಿಲಾತಬೆಟ್ಟು ಗ್ರಾ. ಪಂ. ಸದಸ್ಯ ಕಾಂತಪ್ಪ ಕರ್ಕೇರ ಹಾಗೂ ಹಮೀದ್, ನಾಸಿರ್, ಇಲ್ಯಾಸ್ ಮೊದಲಾದವರು ಉಪಸ್ಥಿತರಿದ್ದರು.



