ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಹೆದ್ದಾರಿಯ ಫರಂಗಿಪೇಟೆ ಎಂಬಲ್ಲಿ ಪಲ್ಟಿಯಾಗಿದೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿರುವ ಟಿ.ಟಿ.ವಾಹನ ಬೆಳಿಗ್ಗೆ 6.30 ರ ಅಂದಾಜಿಗೆ ಫರಂಗಿಪೇಟೆ ಜಂಕ್ಷನ್ ನಲ್ಲಿ ಡಿವೈಡರ್ ಮೇಲೆ ಏರಿ ಬಳಿಕ ಹೆದ್ದಾರಿಗೆ ಪಲ್ಟಿಯಾಗಿದೆ.
ಟಿ.ಟಿ.ಯಲ್ಲಿ ಸುಮಾರು 10 ಮಂದಿ ಪ್ರಯಾಣಿಕರಿದ್ದು,ಯಾವುದೇ ಪ್ರಾಣಾಯಾವಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮಂಗಳೂರಿನಲ್ಲಿ ನಡೆಯುವ ಮದುವೆ ಕಾರ್ಯಕ್ರಮವೊಂದಕ್ಕೆ ಸ್ಟೇಜ್ ಡೆಕೋರೇಶನ್ ನ ಗುತ್ತಿಗೆ ವಹಿಸಿಕೊಂಡ ಬೆಂಗಳೂರಿನ ಇವೆಂಟ್ ನ ಮಾಲಕ ಡೆಕೋರೇಶನ್ ಸಾಮಾಗ್ರಿಗಳ ಜೊತೆ ಬರುತ್ತಿರುವ ವೇಳೆ ಘಟನೆ ನಡೆದಿದೆ.
ಟಿ.ಟಿ.ಯಲ್ಲಿ ಪ್ತಯಾಣಿಸುತ್ತಿದ್ದವರ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.
ಬೆಳಿಗ್ಗಿನ ಹೊತ್ತು ಚಾಲಕ ನಿದ್ಧೆ ಮಂಪರಿನಲ್ಲಿ ನಿಯಂತ್ರಣ ಕಳೆದು ಡಿವೈಡರ್ ನ ಮೇಲೆ ಹತ್ತಿ ಬಳಿಕ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಯಾವುದೇ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಕೋರೇಶನ್ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ಘಟನೆಯಿಂದ ಕೆಲಹೊತ್ತು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು
ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…