ಹುಣಸೂರು: ಹನಗೋಡು ಗ್ರಾ.ಪಂ.ವತಿಯಿಂದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಭೆ ನಡೆಯಿತು.

ಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನಿತಾ ಮಾತನಾಡಿ ಅಂಗವಿಕಲರಲ್ಲಿ ಅಂಗಾಂಗ ವೈಫಲ್ಯವಿರಬಹುದು. ಸೂಕ್ಷ್ಮವಾಗಿ ಗಮನಿಸಿ ಪ್ರೋತ್ಸಾಹಿಸಿದರೆ ಸಾಧನೆಗೆ ವಿಕಲಾಂಗತೆ ತೊಡಕಾಗಿಲ್ಲ ವೆಂಬುದನ್ನು ಹಲವು ಅಂಗವಿಕಲರು ಸಾಧಿಸಿ ತೋರಿಸಿದ್ದು, ನಾವುಗಳು ಅಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಗ್ರಾ.ಪಂ.ಸದಸ್ಯ ಶಿವಣ್ಣ ಮಾತನಾಡಿ ಅಂಗವಿಕಲರು, ಕ್ರೀಡೆ ಸೇರಿದಂತೆ ಕ್ಷೇತ್ರಗಳಲ್ಲಿ ಮಾಡಿದ್ದಾರೆ. ಆದರೆ ಅವರನ್ನು ಗುರುತಿಸಿ ಬೆಂಬಲಿಸುವ ಕೆಲಸವನ್ನು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮಾಡಬೇಕೆಂದು ತಿಳಿಸಿ ಹಿರಿಯ ನಾಗರಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿ ತಂದಿದ್ದು ಅವುಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ನಮ್ಮ ನಿಮ್ಮೇಲ್ಲಾರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆನ್ನಯ್ಯ ಸದಸ್ಯರಾದ ಸಂತೋಷ್, ರತ್ನ ಶ್ರೀಧರ್, ಸಂಗೀತಾ, ಛಾಯಾ ಸೇರಿದಂತೆ ಇತರರು ಇದ್ದರು.



