ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾದ ಕ್ರೀಡೋತ್ಸವವು ದಿನಾಂಕ ಡಿ.22 ಭಾನುವಾರ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ನಡೆಯಲಿರುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಸಮಾಜ ಸೇವೆಯ ಮುಖ್ಯವಾಹಿನಿಯಲ್ಲಿ ಯುವಜನಾಂಗವನ್ನು ತೊಡಗಿಸುವ ಕ್ರಮವಾಗಿ 1991ರಲ್ಲಿ ಪ್ರಾರಂಭಿಸಿದ ಈ ಉತ್ಸವವು ಮೂವತ್ತೆರಡನೆಯ ವರ್ಷದಲ್ಲಿ ಮನ್ನಡೆಯುತ್ತಿದ್ದು ಸೌಹಾರ್ದ, ಸಾಮರಸ್ಯ ಮತ್ತು ಸೌಮನಸ್ಯವನ್ನು ಸಾಧಿಸಿರುತ್ತದೆ.
ಮೂರು ಜಿಲ್ಲೆಗಳಲ್ಲಿರುವ ಪದ್ಮಶಾಲಿ/ಶೆಟ್ಟಿಗಾರ್‌ರ ಹದಿನಾರು ಶ್ರದ್ಧಾಕೇಂದ್ರಗಳಾದ ವೀರಭದ್ರ ದೇವಸ್ಥಾನಗಳ ಮತ್ತು ಪ್ರಾದೇಶಿಕ
ಸಂಘಗಳ ಆತಿಥ್ಯದಲ್ಲಿ ನಡೆಯುತ್ತಿರುವ ಈ ಉತ್ಸವದ ಪ್ರಸಕ್ತ ವರ್ಷದ ಆತಿಥ್ಯವನ್ನು ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನವು ವಹಿಸಿರುತ್ತದೆ. ಸುಮಾರು ಐದು ಸಾವಿರ ಸಮಾಜಬಾಂಧವರು ಒಗ್ಗೂಡುವ ಈ ಬೃಹತ್ ಸಮಾವೇಶಕ್ಕಾಗಿ ಸಿದ್ಧತೆಗಳು ನಡೆಯತ್ತಿವೆ. ಬಾಲಕ ಬಾಲಿಕೆಯರಿಗಾಗಿ, ಯುವಕರಿಗಾಗಿ ಮತ್ತು ಪ್ರೌಢರಿಗಾಗಿ 22 ವಿಭಾಗಗಳಲ್ಲಿ 75 ವಿಭಿನ್ನ ಅಟೋಟ
ಸ್ಪರ್ಧೆಗಳು ನಡೆಯಲಿರುವುದು. ಸುಮಾರು 50 ಮಂದಿ ಕ್ರೀಡಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯೋಜಿತವಾದ ಈ ಸಮಾರಂಭವು ಸಮಾಜದ ಸ್ನೇಹಮಿಲನದ ಅವಕಾಶವನ್ನು ತೆರೆದಿಡುತ್ತಿದೆ.
ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪಪ್ರಜ್ವಲನೆ ಮಾಡಲಿರುವ ಈ
ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್, ಮಂಗಳೂರು ಲೋಕಸಭಾ ಸದಸ್ಯರಾದ ಬೃಜೇಶ್ ಚೌಟ, ಮಂಗಳೂರು ವಿಶ್ವವಿದ್ಯಾನಿಲಯದ ಉನ್ನತ ಅಧಿಕಾರಿಗಳು, ಹದಿನಾರು ದೇವಸ್ಥಾನಗಳ ಮೊತ್ತೇಸರರು
ಮತ್ತಿತರ ಗಣ್ಯರು ಭಾಗವಹಿಸಲಿರುವರು ಎಂದರು.
ಸಮಾಜ ಸಂಘಟನೆಗಾಗಿ ಶ್ರಮಿಸಿದ ಸಾಧಕರನ್ನು ಈ ಸಂದರ್ಭದಲ್ಲಿ
ಗೌರವಿಸಲಾಗುವುದು, ನವೀನ ಮಾದರಿಯ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗುವುದು, ವಿವಾಹಾಕಾಂಕ್ಷಿ ವಧುವರರ ಅನುಕೂಲಕ್ಕಾಗಿ ಪರಿಣಯವೇದಿಕೆಯು ಕಾರ್ಯಾಚರಿಸಲಿರುವುದು. ನವೀಕರಿಸಿದ ಪದ್ಮಶಾಲಿ ಮಹಾಸಭಾದ ವೆಬ್ ಸೈಟನ್ನು ಲೊಕಾರ್ಪಣೆ ಮಾಡಲಾಗುವುದು.
ಪತ್ರಿಕಾ ಗೋಷ್ಠಿಯಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕೊಡಿಯಾಲ್ ಬೈಲ್, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ರಾಯ ಶೆಟ್ಟಿಗಾರ್, ಗಿರೀಶ್ ಶೆಟ್ಟಿಗಾರ್ ವಿಟ್ಲ, ಕ್ರೀಡಾಸಂಚಾಲಕರಾದ
ಸದಾಶಿವ ಶೆಟ್ಟಿಗಾರ್ ಗೋಳಿಜಾರ, ಮನೋರಂಜನ್ ಕರೆ, ಡಾ/ ಲೋಕರಾಜ್ ವಿಟ್ಲ ಉಪಸ್ಥಿತರಿದ್ದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…