ಮುಲ್ಕಿ:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ ,ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ,ಭಾರತದ ಕಾನೂನು ನೆರವು ಘಟಕ, ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿ, ಸಹಯೋಗದಲ್ಲಿ ಅಂತರ್ ಕಾಲೇಜು ಹಾಗೂ ಚರ್ಚ್ ಗಳ ಕ್ರಿಸ್ಮಸ್ ಹಾಡುಗಳ ಸ್ಪರ್ಧೆ,ಕ್ರಿಸ್ಮಸ್ ಸೌಹಾರ್ದ ಕೂಟವು ಗುರುವಾರ ಬೆಳಿಗ್ಗೆ ಹಳೆಯಂಗಡಿ ಕುಬಲಗುಡ್ಡೆಯ ಇಂಡಿಯನ್ ಯೋಗ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಕ್ರ್ಯೆಸ್ತ ಧರ್ಮ ಪ್ರಾಂತ್ಯದ ಬಿಷಪ್ ರೈಟ್ ರೆವೆ. ಡಾ. ಪೀಟರ್ ಪೌಲ್ ಸಾಲ್ದಾನ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಸಹೋದರತೆ ಸಹಬಾಳ್ವೆ ಮೂಲಕ ನೆಮ್ಮದಿಯ ಶಾಂತಿ ಲಭಿಸಲಿ ಎಂದರು
ಹಿರಿಯ ಸಿವಿಲ್ ನ್ಯಾಯಧೀಶೆ ಶೋಭಾ ಬಿ ಜಿ ಕಾನೂನು ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಭಾರತದ ಶ್ರೇಷ್ಠ ಸಂವಿಧಾನದ ಮೂಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಪರಾಧ ಮುಕ್ತ ಸಮಾಜ ಸಾದ್ಯ ಎಂದರು
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್ ವಿ ,ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ,ಪಕ್ಷಿಕೆರ ಚರ್ಚ್‌ನ ಧರ್ಮಗುರು ಅನಿಲ್ ಅಲ್ಪ್ರೆಡ್ ಡಿಸೋಜ, ಮುಲ್ಕಿ ಚರ್ಚ್ ನ ಧರ್ಮಗುರು ವಂ. ಆ್ಯಂಟನಿ ಶೇರಾ,ಸಿ ಎಸ್ ಐ ಕೆ ಎಸ್ ಡಿಯ ಬಿಷಪ್ ರೈಟ್ ರೆವೆ. ಹೇಮಚಂದ್ರ ಕುಮಾರ್ ಹಾಗೂ ಉದ್ಯಮಿ ರಾಹುಲ್ ಕರ್ಕಡ ಶಾಂತಿ ಜಾಥಾ ಉದ್ಘಾಟಿಸಿದರು
ಸಮಾರಂಭದ ಅಧ್ಯಕ್ಷತೆಯನ್ನು ಭಾರತದ ಕ್ರೈಸ್ತ ಚರ್ಚ್ ಗಳ ಒಕ್ಕೂಟದ ಅಧ್ಯಕ್ಷ ನೋಟರಿ ಡೇನಿಯಲ್ ದೇವರಾಜ್ ವಹಿಸಿದ್ದರು
ಧಾರ್ಮಿಕ ಚಿಂತಕ ಶ್ರೀಪತಿ ಭಟ್, ಶಿಮಂತೂರು,ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕದಿಕೆ ಕೇಂದ್ರ ಜುಮ್ಮಾ ಮಸೀದಿಯ ಧರ್ಮಗುರು ಪಿ.ಎ ಅಬ್ದುಲ್ಲಾ ಝೈನಿ ಬಡಗನ್ನೂರು, ಹರೇಕಳ ರ ಉಲ್ಲಾಸ್ ನಗರ ಜುಮ್ಮಾ ಮಸೀದಿಯ ಧರ್ಮಗುರು ಶರೀಫ್ ಸಖಾಫಿ,
ಮುಲ್ಕಿ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್
ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಪ್ರಕಾಶ್ ನಾಯಕ್ ,ವಕೀಲರುಗಳಾದ ಪ್ರತೀಕ್ಷಾ,ಜೀವನ್,ಶಶಿಕುಮಾರ್ , ಮುಲ್ಕಿ ಪೊಲೀಸ್ ಠಾಣೆಯಾಗಿ ಎಎಸ್ ಐ ಸುರೇಶ್, ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್ ಮತ್ತಿತರರು ಉಪಸ್ಥಿತರಿದ್ದರು
ನ್ಯಾಯವಾದಿಗಳಾದ ಪ್ರಸಾದ್ ಶೆಟ್ಟಿ, ರವೀಶ್ ಕಾಮತ್, ಸುಭಾಷ್ ಚಂದ್ರ ಸಾಗರ್,ಶಿವರಾಜ್,ರಕ್ಷಿತ್ ಕಾನೂನು ಬಗ್ಗೆ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ, ಉಚಿತ ಕ್ರ್ಯೆಸ್ತ ವಿವಾಹ ಪ್ರಮಾಣ ಪತ್ರ ನೊಂದಣಿ ಶಿಬಿರ ಹಾಗೂ ಒಕ್ಕೂಟದ ವತಿಯಿಂದ ಉಚಿತವಾಗಿ ವಿವಾಹ ನೊಂದಣಿ ಪ್ರಮಾಣ ಪತ್ರ ನೀಡಲಾಯಿತು
ಹರಿಣಿ ಸುಶಾಂತಿ ಬಂಗೇರ ಸ್ವಾಗತಿಸಿದರು ಪ್ರಸನ್ನಿ ಧನ್ಯವಾದ ಅರ್ಪಿಸಿದರು ಹರೀಶ್ ಕಾರ್ಯಕ್ರಮ ನಿರೂಪಿಸಿದರು
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…