ಹನಗೋಡು: ಸಂಚಾರಿ ನಿಯಮಗಳ ಬಗ್ಗೆ ಜನರಿಗೆ ಜಾಗೃತಿ ಸುರಕ್ಷತೆ ದೃಷ್ಟಿಯಿಂದ ಸಂಚಾರಿ ನಿಯಮಗಳನ್ನು ಜನರು ಚಾಚೂ ತಪ್ಪದೇ ಪಾಲಿಸಬೇಕು. ಇದರಿಂದ ಬಾರಿ ದಂಡ ಪಾವತಿ, ಹಾಗೂ ಅಮೂಲ್ಯವಾದ ಪ್ರಾಣ ಹಾನಿ ತಪ್ಪುತ್ತದೆ ಎಂದು ಪಿಎಸ್ಐ ರಾಮು ತಿಳಿಸಿದ್ದಾರೆ.
ಹನಗೋಡು ಮತ್ತು ಪಕ್ಕದ ಹಿಂಡಗುಡ್ಲುಗ್ರಾಮದಲ್ಲಿ ಸಂಚಾರಿ ನಿಯಮ ಪಾಲಿಸದೆ ಅಜಾಗರೂಕತೆ ಚಾಲನೆಯಿಂದ ಇತ್ತೀಚೆಗೆ ಎರಡು ಆಕ್ಸಿಡೆಂಟ್ ಗಳಾಗಿ ಇಬ್ಬರು ಮರಣ ಹೊಂದಿರುತ್ತಾರೆ. ಹುಣಸೂರು ಗ್ರಾಮಾಂತರ ಪೋಲೀಸ್ ಇಲಾಖೆಯಿಂದ ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾನೂನು ಕಾಯ್ದೆಗಳು ಜನ ಸಾಮಾನ್ಯರ ಹಿತದೃಷ್ಟಿಯಿಂದ ಜಾರಿಗೆ ತಂದಿರುವುದು. ವಾಹನ ಚಾಲನೆ ಮಾಡುವಾಗ ಚಾಚೂ ತಪ್ಪದೆ ಹೆಲೈಟ್ ಹಾಗೂ ಸಂಚಾರಿ ನಿಯಮ ಪಾಲನೆ ಮಾಡಿದಲ್ಲಿ ಅಪಘಾತ ತಪ್ಪುವ ಜತೆಗೆ ದಂಡ ತೆರೆವುದು ಹಾಗೂ ಪ್ರಾಣ ಹಾನಿ ತಪ್ಪಿಸಬಹುದು. ನಿಯಮಗಳನ್ನು ಮೀರುತ್ತಿರುವುದು ಬಹುತೇಕ ಯುವಜನತೆ ವಿದ್ಯಾವಂತರೇ ಎನ್ನುತ್ತಿರುವುದು ನಿಜಕ್ಕೂ ವಿಷಾಧನೀಯ. ಈ ನಿಟ್ಟಿನಲ್ಲಿ ಇಲಾಖೆ ಸೂಚಿಸುವ ನಿಯಮಗಳನ್ನು ಚಾಚೂ ತಪ್ಪದೇ
ಪಾಲಿಸಿ, ಹಾಗೂ ಚಾಲನೆ ವೇಳೆ ಮೊಬೈಲ್ ಬಳಕೆ ಬೇಡ, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್, ಮದ್ಯಪಾನ ಮಾಡಿ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ಸೈಡ್ ಮಿರರ್ ಇಲ್ಲದ ವಾಹನ , ತುರ್ತು ವಾಹನಗಳಿಗೆ ದಾರಿ ಬಿಡದಿರುವುದು, ಮುಖ್ಯವಾಗಿ ಅಪ್ರಾಪ್ತರ ವಾಹನ ಚಾಲನೆ ನಿಷೇಧ ಇದ್ದರೂ ಪೋಷಕರು ಮಕ್ಕಳಿಗೆ ವಾಹನ ಕೊಡುವುದು ಇವೆಲ್ಲವೂ ಅನಾವುತಗಳಿಗೆ ಕಾರಣವಾಗುತ್ತವೆ ಹಾಗಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಎಎಸ್‌ಐ ಕೆ.ಬಿ.ಚಿನ್ನಸ್ವಾಮಿ ಇಮ್ರಾನ್ ಷರೀಫ್ ಮತ್ತು ಆಟೋ ಚಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…