ಪುತ್ತೂರು: ನನ್ನ ಹೆಸರಿನಲ್ಲಿ ಸ್ವಂತ ಜಾಗವಿದೆ, ಆದರೂ ನನ್ನ ಜಾಗದಲ್ಲಿ ನ ನಗೆ ಮನೆ ಕಟ್ಟಲು ಬಿಡುತ್ತಿಲ್ಲ ಎಂದು ಪುತ್ತೂರು ನಗರಸಭಾ ವ್ಯಾಪ್ತಿಯ ಮಹಿ ಳೆಯೋರ್ವರು ಪುತ್ತೂರು ಶಾಸಕರಾದ ಅಶೋಕ್ ರೈ ಅವರಲ್ಲಿ ದೂರು ನೀಡಿದ್ದಾರೆ.
ನೆಲ್ಲಿಕಟ್ಟೆ ನಿವಾಸಿ ಸುಶೀಲಾ ಎಂಬವರು ದೂರು ನೀಡಿದ ಮಹಿಳೆ. ನೆಲಿ ಕಟ್ಟೆಯಲ್ಲಿ ೫ ಸೆಂಟ್ಸ್ ಜಾಗ ಬಹಳ ವರ್ಷಗಳ ಹಿಂದೆಯೇ ಮಂಜೂರಾಗಿತ್ತು. ಅ ಜಾಗದಲ್ಲಿ ಮನೆ ಕಟ್ಟಲು ಮುಂದಾದಾಗ ಅದನ್ನು ತಡೆಯಲಾಗಿತ್ತು. ನಮ್ಮ ಹೆಸರಿನಲ್ಲಿ ಜಾಗವಿದ್ದರೂ ನಮಗೆ ಮನೆ ಕಟ್ಟುವಂತಿಲ್ಲ, ನನ್ನ ಪತಿ ಇದೇ ಕಾರಣಕ್ಕೆ ಈ ಹಿಂದೆ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ನನ್ನ ಜಾಗದಲ್ಲಿ ಮನೆ ಕಟ್ಟಲು ಅವಕಾಶ ಮಾಡಿಕೊಡುವಂತೆ ಶಾಸಕರಿಗೆ ಮಹಿಳೆ ಮನವಿ ಸಲ್ಲಿಸಿದ್ದಾರೆ.
ಪರಿಶೀಲನೆ ಮಾಡಿ ತಹಶಿಲ್ದಾರ್‌ಗೆ ಸೂಚನೆ
ಮಹಿಳೆಯ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ ಅವರು ತಕ್ಷಣವೇ ತಹಶಿಲ್ದಾರ್‌ಗೆ ಕರೆ ಮಾಡಿ ಮಹಿಳೆಯ ದೂರನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಕೂಡಲೇ ಸ್ಥಳದಲ್ಲಿ ಸರ್ವೆ ನಡೆಸಿ ಮಹಿಳೆ ಹೆಸರಿನಲ್ಲಿ ಜಾಗ ಮಂಜೂರಾಗಿದ್ದರೆ ಅದನ್ನು ಕೊಡುಸುವಂತೆ ಸೂಚನೆ ನೀಡಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…