ಬಂಟ್ವಾಳ: ಬಿ.ಸಿ.ರೋಡಿನ ಆಡಳಿತ ಸೌಧದ ಕಚೇರಿ ಪುಲ್ ರಶ್..ಜನವೋ ಜನ.. ಕಚೇರಿಯ ಒಳಗೆ ಕಾಲಿಡಲು ಅಸಾಧ್ಯ ಎಂಬಂತೆ ಜನಜಂಗುಲಿ..ಕಚೇರಿಯ ನಾಲ್ಲು ಸುತ್ತಲೂ ಜನ ಸಂದಣಿ, ಸರತಿ ಸಾಲುಗಳು. ಇದೇನಪ್ಪಾ ಅಂತ ಕೇಳಿದರೆ, ರೇಷನ್ ಕಾರ್ಡ್ ವಿತರಣೆ ನಡೆಸುವ ಕಾರ್ಯ ನಡೆಯುತ್ತಿರುವುದು ಎಂಬ ಉತ್ತರ ಅಧಿಕಾರಿಗಳಿಂದ ಬಂತು.

ತಿದ್ದುಪಡಿ, ಹೆಸರು ಸೇರ್ಪಡೆ, ರದ್ದು ಮತ್ತು ವಾಸ್ತವ್ಯದ ಬದಲಾವಣೆಗಾಗಿ ಸರಕಾರ ಅವಕಾಶ ನೀಡಿ , ಖಾಸಗಿ ಗ್ರಾಮ ಒನ್ ಗಳಲ್ಲಿ ಅರ್ಜಿಯನ್ನು ಸ್ವೀಕರಿಸಿಲು ಅವಕಾಶ ನೀಡಿತ್ತು. ಹೀಗೆ ನೀಡಿದ ಅರ್ಜಿಯನ್ನು ಮತ್ತು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಕಂದಾಯ ಇಲಾಖೆಯ ಆಹಾರ ಶಾಖೆಯಲ್ಲಿ ರೇಷನ್ ಕಾರ್ಡ್ ನೀಡಲಾಗುತ್ತಿದೆ. ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ಇಂದು ರೇಷನ್ ಕಾರ್ಡ್ ವಿತರಣೆಯಾಗುತ್ತಿದ್ದು, ಸುಮಾರು ಮುನ್ನೂರು ಜನ ಕಾರ್ಡ್ ಪಡೆಯುವ ಉದ್ದೇಶದಿಂದ ಕಚೇರಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹಾಗಾಗಿ ಬೆಳಿಗ್ಗಯಿಂದಲೇ ಕಂದಾಯ ಇಲಾಖೆಯ ಆವರಣದಲ್ಲಿ ಜನಸಂದಣಿಯಿತ್ತು.

ಸಮಸ್ಯೆಯಾಗದಂತೆ ವಿತರಣೆ: ಅಹಾರ ಶಾಖೆ ಅಧಿಕಾರಿ ರವಿ
ಸುಮಾರು 300 ಜನರಿಗೆ ರೇಷನ್ ಕಾರ್ಡ್ ಪಡೆಯಲು ಕಚೇರಿಗೆ ಬರುವಂತೆ ಟೋಕನ್ ನೀಡಿದ್ದು, ಶುಕ್ರವಾರ ,ಶನಿವಾರ ರಜೆಯಾದ ಕಾರಣ ಎಲ್ಲರೂ ಇಂದು ಬಂದಿದ್ದಾರೆ. ಮಧ್ಯಾಹ್ನ ವೇಳೆ 150 ಕ್ಕೂ ಅಧಿಕ ಮಂದಿಗೆ ಕಾರ್ಡ್ ನೀಡಲಾಗಿದೆ.ಸಂಜೆ 4 ಗಂಟೆಯೊಳಗೆ ಯಾವುದೇ ಸಮಸ್ಯೆಯಾಗದಂತೆ ನಿಢುವ ವ್ಯವಸ್ಥೆ ಮಾಡಲಾಗುತ್ತದೆ.
ತಿಂಗಳುಗಳ ಕಾಲ ಅವಕಾಶ ನೀಡಿ: ತುಂಗಪ್ಪ ಬಂಗೇರ
ತಿದ್ದುಪಡಿ, ಹೆಸರು ಸೇರ್ಪಡೆ ಗಾಗಿ ಇನ್ನು ಒಂದು ತಿಂಗಳ ಕಾಲ ಅವಕಾಶ ನೀಡುವಂತೆ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಒತ್ತಾಯ ಮಾಡಿದ್ದಾರೆ



