ಬಂಟ್ವಾಳ: ಬಿ.ಸಿ.ರೋಡಿನ ಆಡಳಿತ ಸೌಧದ ಕಚೇರಿ ಪುಲ್ ರಶ್..ಜನವೋ ಜನ.. ಕಚೇರಿಯ ಒಳಗೆ ಕಾಲಿಡಲು ಅಸಾಧ್ಯ ಎಂಬಂತೆ ಜನಜಂಗುಲಿ..ಕಚೇರಿಯ ನಾಲ್ಲು ಸುತ್ತಲೂ ಜನ ಸಂದಣಿ, ಸರತಿ ಸಾಲುಗಳು. ಇದೇನಪ್ಪಾ ಅಂತ ಕೇಳಿದರೆ, ರೇಷನ್ ಕಾರ್ಡ್ ವಿತರಣೆ ನಡೆಸುವ ಕಾರ್ಯ ನಡೆಯುತ್ತಿರುವುದು ಎಂಬ ಉತ್ತರ ಅಧಿಕಾರಿಗಳಿಂದ ಬಂತು.
ತಿದ್ದುಪಡಿ, ಹೆಸರು ಸೇರ್ಪಡೆ, ರದ್ದು ಮತ್ತು ವಾಸ್ತವ್ಯದ ಬದಲಾವಣೆಗಾಗಿ ಸರಕಾರ ಅವಕಾಶ ನೀಡಿ , ಖಾಸಗಿ ಗ್ರಾಮ ಒನ್ ಗಳಲ್ಲಿ ಅರ್ಜಿಯನ್ನು ಸ್ವೀಕರಿಸಿಲು ಅವಕಾಶ ನೀಡಿತ್ತು. ಹೀಗೆ ನೀಡಿದ ಅರ್ಜಿಯನ್ನು ಮತ್ತು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಕಂದಾಯ ಇಲಾಖೆಯ ಆಹಾರ ಶಾಖೆಯಲ್ಲಿ ರೇಷನ್ ಕಾರ್ಡ್ ನೀಡಲಾಗುತ್ತಿದೆ. ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ಇಂದು ರೇಷನ್ ಕಾರ್ಡ್ ವಿತರಣೆಯಾಗುತ್ತಿದ್ದು, ಸುಮಾರು ಮುನ್ನೂರು ಜನ ಕಾರ್ಡ್ ಪಡೆಯುವ ಉದ್ದೇಶದಿಂದ ಕಚೇರಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹಾಗಾಗಿ ಬೆಳಿಗ್ಗಯಿಂದಲೇ ಕಂದಾಯ ಇಲಾಖೆಯ ಆವರಣದಲ್ಲಿ ಜನಸಂದಣಿಯಿತ್ತು.
ಸಮಸ್ಯೆಯಾಗದಂತೆ ವಿತರಣೆ: ಅಹಾರ ಶಾಖೆ ಅಧಿಕಾರಿ ರವಿ
ಸುಮಾರು 300 ಜನರಿಗೆ ರೇಷನ್ ಕಾರ್ಡ್ ಪಡೆಯಲು ಕಚೇರಿಗೆ ಬರುವಂತೆ ಟೋಕನ್ ನೀಡಿದ್ದು, ಶುಕ್ರವಾರ ,ಶನಿವಾರ ರಜೆಯಾದ ಕಾರಣ ಎಲ್ಲರೂ ಇಂದು ಬಂದಿದ್ದಾರೆ. ಮಧ್ಯಾಹ್ನ ವೇಳೆ 150 ಕ್ಕೂ ಅಧಿಕ ಮಂದಿಗೆ ಕಾರ್ಡ್ ನೀಡಲಾಗಿದೆ.ಸಂಜೆ 4 ಗಂಟೆಯೊಳಗೆ ಯಾವುದೇ ಸಮಸ್ಯೆಯಾಗದಂತೆ ನಿಢುವ ವ್ಯವಸ್ಥೆ ಮಾಡಲಾಗುತ್ತದೆ.
ತಿಂಗಳುಗಳ ಕಾಲ ಅವಕಾಶ ನೀಡಿ: ತುಂಗಪ್ಪ ಬಂಗೇರ
ತಿದ್ದುಪಡಿ, ಹೆಸರು ಸೇರ್ಪಡೆ ಗಾಗಿ ಇನ್ನು ಒಂದು ತಿಂಗಳ ಕಾಲ ಅವಕಾಶ ನೀಡುವಂತೆ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಒತ್ತಾಯ ಮಾಡಿದ್ದಾರೆ
ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಚಿನ್ನ ಮಂಡಳಿ ಅಂದಾಜಿಸಿದೆ. ಅಮೆರಿಕನ್ ಡಾಲರ್…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್‌ನನ್ನು ಬಂಟ್ವಾಳ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ…
ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಡ್ರಗ್ಸ್ ಹಾವಳಿ ವಿರುದ್ಧದ ಸಮರದ ಅಂಗವಾಗಿ ಮಂಗಳೂರು ಪೊಲೀಸರು ದಿಢೀರ್ ಆಗಿ ವಿದ್ಯಾರ್ಥಿಗಳಿದ್ದ ಬಸ್,…
ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 90 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 211 ರನ್‌ಗಳ ಗುರಿ…
ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಿಶ್ವಸಂಸ್ಥೆಯ ಭದ್ರತಾ…
ಯುಎಇ ಮೂಲದ ಟೋರ್ಟಿಲ್ಲಾ ಮತ್ತು ಫ್ಲಾಟ್‌ಬ್ರೆಡ್ ತಯಾರಕರಾದ ಫ್ಲೋರ್ ಮಾಸ್ಟರ್ಸ್, ಆಂಧ್ರಪ್ರದೇಶದಲ್ಲಿ ವಿಶ್ವ ದರ್ಜೆಯ ಸಂಯೋಜಿತ ಫ್ಲಾಟ್‌ಬ್ರೆಡ್ ಉತ್ಪಾದನಾ ಪರಿಸರ…