ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಗ್ರಾಮ ಸಭೆ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ನರೇಗಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸಿ ಆರ್ ಯೋಗೇಶ್ ಮಾತನಾಡಿ ಯಾವ ಯೋಜನೆಗಳಲ್ಲಿ ಕಾಮಗಾರಿಯ ನಷ್ಟನವಾಗಿದೆ ಆ ಅನುಷ್ಠಾನವಾಗಿರುವ ಕಾಮಗಾರಿಗಳು ರೈತರಿಗೆ ಸಾರ್ವಜನಿಕರಿಗೆ ಮತ್ತು ಫಲಾನುಭವಿಗಳಿಗೆ ಉಪಯೋಗವಾಗಿದೆ ಆ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನವಾಗಿದೆಯಾ, ಆ ಎಲ್ಲ ಲೆಕ್ಕವನ್ನು ಸಾರ್ವಜನಿಕವಾಗಿ ಲೆಕ್ಕಪತ್ರವನ್ನು ಮಂಡಿಸಿ ಅದರ ಸಾಧಕ ಬಾದಕಗಳು ಬಗ್ಗೆ ಉಪಯುಕ್ತತೆ ಮತ್ತು ಅನುಕೂಲಗಳ ಬಗ್ಗೆ ಸಭೆಯಲ್ಲಿ ಸಾರ್ವಜನಿಕವಾಗಿ ಚರ್ಚೆಸಿ ಆ ಚರ್ಚೆಯನ್ನು ನಾವು ನಡವಳಿಯಲ್ಲಿ ದಾಖಲಿಸಿ ವರದಿಯನ್ನು ಸರ್ಕಾರಕ್ಕೆ ಕಳಿಸುವುದು ಈ ಸಭೆಯ ಮುಖ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಯತಿಂದ್ರ ನೂಡಲ್ ಅಧಿಕಾರಿ. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಅನಿತಾ. ಸುಕನ್ಯ. ಪಿಡಿಒ ಸತೀಶ್. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೀತಾ. ಅಕ್ಕಯಮ್ಮ. ರಿಯಾಜ್ ನಾರಾಯಣ ದ್ರಾಕ್ಷಾಯಣಮ್ಮ. ಪೂರ್ಣಿಮಾ. ಶೀಲಾ. ರೇಣುಕಸ್ವಾಮಿ. ಸೆಕ್ ಅಸ್ಲಾಂ. ಸಂಶುದ್ದೀನ್. ಮಹದೇವ್. ಜಾಫರ್ ಸಾಧಿಕ್. ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.



