ಕರಾವಳಿ

ಬಂಟರ ಸಂಘದಿಂದ ಸುಳ್ಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

ಸಮಾಜದಲ್ಲಿ ತಮ್ಮ ಐಡೆಂಟಿಟಿಗಾಗಿ ಮಕ್ಕಳು ಹೀಗೆ ಇರಬೇಕೆಂದು ಯಾವ ಪೋಷಕರೂ ಕೂಡಾ ಮಕ್ಕಳಿಗೆ ಒತ್ತಡ ಹೇರಬೇಡ, ಅವರ ಆಸಕ್ತಿಯ ಕ್ಷೇತ್ರವನ್ನು ತಿಳಿದು ಅದಕ್ಕೆ ತಕ್ಕುದಾದ ಪ್ರೋತ್ಸಾಹ ನೀಡಿದಾಗ ಅವರು ಬೆಳೆಯುತ್ತಾರೆ, ನಮಗೂ ಗೌರವ ಸಿಗುತ್ತದೆ. ಆ ನಿಟ್ಟಿನಲ್ಲಿ ಪೋಷಕರು ತೊಡಗಿಸಿಕೊಳ್ಳಬೇಕು.” ಎಂದು ಮಂಗಳೂರು ಅಭಿಮತ ಟಿ.ವಿ. ಆಡಳಿತ ಪಾಲುದಾರರಾದ ಡಾ| ಮಮತಾ ಪಿ. ಶೆಟ್ಟಿ ಹೇಳಿದರು.

 

ಡಿ.29ರಂದು ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘ ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದೊಂದಿಗೆ ಸುಳ್ಯ ಕೇರ್ಪಳದ ಬಂಟರ ಸಂಘದ ಸಭಾಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಎಲ್ಲ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಂಟ ಸಮುದಾಯ ಸಮಾಜಕ್ಕೆ ನಾಯಕತ್ವ ನೀಡಿದೆ. ಬಂಟರು ಸ್ವಾರ್ಥಿಗಳಲ್ಲ. ಸಮಾಜಕ್ಕಾಗಿ ದುಡಿಯುವವರು, ಸುಳ್ಯದ ಬಂಟ ಸಮುದಾಯವೂ ಸಮಾಜಕ್ಕಾಗಿ ದುಡಿಯುತ್ತಿದೆ ಎಂದ ಅವರು, ಸಮಾಜದ ವತಿಯಿಂದ ನಡೆಯುವ ಕಾರ್ಯಕ್ರಮಕ್ಕೆ ನಾವು ಹಿರಿಯರು ಮಾತ್ರ ಭಾಗವಹಿಸುವುದಲ್ಲ, ನಮ್ಮ ಮಕ್ಕಳನ್ನು ಕೂಡಾ ಕರೆದುಕೊಂಡು ಬಂದು ನಮ್ಮ ಸಮಾಜದ ಆಚಾರ ವಿಚಾರಗಳನ್ನು ಅವರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.

ನಮ್ಮ ಕೆಲಸದ ಬಗ್ಗೆ ತೃಪ್ತಿ ಇದೆ : ಜಿ.ಪಿ.ರೈ

ಅಧ್ಯಕ್ಷತೆ ವಹಿಸಿದ ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು, “ನಮ್ಮ ಹಿರಿಯರ ಆಶಯದಂತೆ ನಮ್ಮ ಈಗಿನ ಆಡಳಿತ ಮಂಡಳಿ ಇಲ್ಲಿ ಹಾಸ್ಟೆಲ್ ಹಾಗೂ ಸಮುದಾಯ ಭವನವನ್ನು ಸುಂದರವಾಗಿ ನಿರ್ಮಿಸಲಾಗಿದೆ. ನಮ್ಮ ಕೆಲಸ ಕಾರ್ಯದಲ್ಲಿ ನಮಗೆ ತೃಪ್ತಿ ಇದೆ. ನಮ್ಮ ಕಾರ್ಯ ಸಾಧನೆಗೆ ಹೊರಗಿನವರು. ಪ್ರಶಂಸಿಸುತ್ತಾರೆ. ಜಿಲ್ಲೆಯಲ್ಲಿಯೂ ಹೆಸರಿದೆ. ಆದರೆ ಇಲ್ಲಿ ನಮ್ಮವರೇ ಕೆಲವರು ಒಪ್ಪುತ್ತಿಲ್ಲ ಎಂದ ಅವರು ಬಂಟ ಸಮುದಾಯ ಭವನದ ಬೆಳವಣಿಗೆ, ಹೊರ ಬಾಕಿಯ ಕುರಿತು ವಿವರವನ್ನು ಸಭೆಯಲ್ಲಿ ಮುಂದಿಟ್ಟರು.

ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪರಸ್ಕೃತ, ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ವಿ ಶೆಟ್ಟಿಯವರು ಸಮಾರಂಭವನ್ನು ಉದ್ಘಾಟಿಸಿದರು.

ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ವೇತನ ಮತ್ತು ಪ್ರಶಸ್ತಿ ಸಮಿತಿ ಚೇರ್ ಮ್ಯಾನ್ ಉಮೇಶ್ ಶೆಟ್ಟಿಯವರು. ಬೆಂಗಳೂರು ಸಂಘದಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಬೆಂಗಳೂರು ಬಂಟರ ಸಂಘದ ನಿರ್ದೇಶಕಿ ಶ್ರೀಮತಿ ಶೋಭಾ ಶೇಖ ಮುಖ್ಯ ಅತಿಥಿಗಳಾಗಿದ್ದರು.

ಪ್ರತಿಭಾ ಪುರಸ್ಕಾರ : ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬಂಟ ಸಮಾಜದ ಗಂಗಾಧರ ರೈ ಸೋಣಂಗೇರಿ, ಐತ್ತಪ್ಪ ರೈ ಅಜಂಗಳ, ಕರುಣಾಕರ ಆಳ್ವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಬಂಟ ಸಮುದಾಯ ಭವನಕ್ಕೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು.ನನ್ನ ಮನಸ್ಸು – ನನ್ನ ಕನಸ್ಸು ಕೃತಿ ಬಿಡುಗಡೆ

ಕು.ನಿರೀಕ್ಷಾ ಸುಲಾಯರ ಕವನ ಸಂಕಲನ ನನ್ನ ಮನಸ್ಸು – ನನ್ನ ಕನಸ್ಸು ಕೃತಿ ೨೭ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿದ್ದು, ಪ್ರತಿಭಾ ಪುರಸ್ಕಾರದಲ್ಲಿ ಮರು ಬಿಡುಗಡೆಗೊಳಿಸಲಾಯಿತು. ಬಳಿಕ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಬಂಟರ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀಮತಿ ಸನ್ನುತ ರೈ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಷಾ ಬಿ ಜಾಲ್ಕೂರು ವಲಯ ಬಂಟರ ಸಂಘದ ಅಧ್ಯಕ್ಷ ಶಿವರಾಮ ರೈ, ಸುಳ್ಯ ವಲಯ ಬಂಟರ ಸಂಘದ ಅಧ್ಯಕ್ಷ ದಯಾಕರ ರೈ, ಅರಂತೋಡು ವಲಯ ಬಂಟರ ಸಂಘದ ಅಧ್ಯಕ್ಷ ಜಿ.ಕೆ.ರೈ, ಬೆಳ್ಳಾರೆ ವಲಯ ಬಂಟರ ಸಂಘದ ಅಧ್ಯಕ್ಷ ಕರುಣಾಕರ ಆಳ್ವ ವೇದಿಕೆಯಲ್ಲಿದ್ದರು
ಸುಳ್ಯ ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಷ್ಯಂದ ರೈ ತೋಟ ಸ್ವಾಗಡಿಸಿ, ಕೋಶಾಧಿಕಾರಿ ಗಂಗಾಧರ ರೈ ಸೋಣಂಗೇರಿ ವಂದಿಸಿದರು. ಶ್ರೀಮತಿ ಗೀತಾ ಶೆಟ್ಟಿ ಹಾಗೂ ಶ್ರೀಮತಿ ವಸಂತಿ – ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುನಂದ ಶೆಟ್ಟಿ, ಉಪಾ ಶೆಟ್ಟಿ, ಅಕ್ಷತಾ ಶೆಟ್ಟಿ ಮುದಲಾದವರು ಸಹಕರಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…

6 hours ago

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…

6 hours ago

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…

6 hours ago

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…

6 hours ago

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…

6 hours ago

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…

6 hours ago