ಹನಗೋಡು ಹೋಬಳಿಯ ಚಿಲ್ಕುಂದ ಗ್ರಾಮ ಪಂಚಾಯ್ತಿ ವರಿಷ್ಟರ ಗಾದಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಜಗದೀಶ್ (ಸಾಮಾನ್ಯ) ಅವಿರೋಧವಾಗಿ ಆಯ್ಕೆಯಾದರು.
ಆಂತರಿಕ ಒಪ್ಪಂದಂತೆ ಹಿಂದಿನ ಅಧ್ಯಕ್ಷ ಸತೀಶ್ ರಾಜಿನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.

ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 16 ಸದಸ್ಯರಿದ್ದು, ಹಬ್ಬನಕುಪ್ಪೆ ಕ್ಷೇತ್ರದ ಜಗದೀಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಎಇಇ ನಿಶಾಂತ್ ರವರು ಜಗದೀಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಪಟಾಕಿ ಸಿಡಿಸಿ ಸಂಭ್ರಮ:
ಗ್ರಾ.ಪಂ. ವರಿಷ್ಟರ ಆಯ್ಕೆ ಪ್ರಕಟಿಸುತ್ತಿದ್ದಂತೆ ಗ್ರಾ.ಪಂ.ಹೊರಗಡೆ ಜಮಾಯಿಸಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ನಡೆಸಿದರು.
ಅಭಿನಂದನೆ : ನೂತನ ಗ್ರಾ.ಪಂ.ವರಿಷ್ಟರನ್ನ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರೇಮಕುಮಾರ್, ಮಾತನಾಡಿ ನೂತನ ಅಧ್ಯಕ್ಷರು ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಬೀದಿ ದೀಪ ಸೇರಿದಂತೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಬಡಜನರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಬೇಕೆಂದು ತಿಳಿಸಿದರು. ನಂತರ ಮಾತನಾಡಿದ ಅಧ್ಯಕ್ಷ ಜಗದೀಶ್ ಶಾಸಕ ಹರೀಶ್ ಗೌಡರ ಸಲಹೆ ಮತ್ತು ಗ್ರಾ.ಪಂ.ಸದಸ್ಯರ ಸಹಕಾರದಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ದಿ ಕಾರ್ಯ ಕೈಗೊಳ್ಳುತ್ತೇನೆಂದರು.
ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇನೆ ಎಂದು ಹೇಳಿದರು . ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಆಗಬೇಕಿರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಕಾರ ಪಡೆಯುತ್ತೇನೆ
ಈ ಸಂದರ್ಭದಲ್ಲಿ ವಿನೋದ್ ರಾಜ್ ಶಿವಕುಮಾರ್ ವಸಂತಕುಮಾರಿ ಶೋಭಾ ಜಯರಾಮ್ ಗಾಯಿತ್ರಿ ಕಾವೇರಮ್ಮ ಗೌರಮ್ಮ ನಾಗರತ್ನ ಸೇರಿದಂತೆ ಜೆಡಿಎಸ್ ಮುಖಂಡರು ಅನೇಕರಿದ್ದರು.



