ಶ್ರೀ ಕೃಷ್ಣ ಮಂದಿರ (ರಿ) ಅಮ್ಟೂರು, ನವಜ್ಯೋತಿ ಮಿತ್ರ ಮಂಡಳಿ (ರಿ) ಅಮ್ಟೂರು, ಜ್ಯೋತಿ ಮಹಿಳಾ ಮಂಡಳಿ (ರಿ) ಅಮ್ಟೂರು ಹಾಗೆನೇ ಅಮ್ಟೂರು ಶ್ರೀ ಕೃಷ್ಣ ಮಂದಿರದ 25ನೇ ವಾರ್ಷಿಕ ಮಹೋತ್ಸವ ವಿಜೃಂಭಣೆಯಿAದ ನಡೆದಿದೆ.
ಡಿ.28ರಂದು ಬೆಳಗ್ಗೆ ಗಂಟೆ 8-30ರಿಂದ ಗಣಹೋಮ, ಶ್ರೀ ಶನಿ ಪೂಜೆ, ಮಧಾಹ್ನ ಗಂಟೆ 12-30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದೆ. ಸಂಜೆ ಗಂಟೆ 4 ರಿಂದ ಭಜನಾ ಸಂಕೀರ್ತನೆ ನಡೆದು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸಿದೆ. ರಾತ್ರಿ ಗಂಟೆ 7-30ಕ್ಕೆ ಧಾರ್ಮಿಕ ಸಭೆ ನಡೆದಿದ್ದು, ಧಾರ್ಮಿಕ ಸಭೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಬಳಿಕ ಮಾತನಾಡಿದ ಇವರು, ಹಿಂದೂ ತರುಣರು ಆರ್‌ಎಸ್‌ಎಸ್ ಸಂಘಟನೆಯ ಪ್ರೇರಣೆಯಿಂದ ಹಿಂದೂ ಸಮಾಜಕ್ಕಾಗಿ ಕೆಲಸ ಕಾರ್ಯಗಳನ್ನ ಮಾಡುತ್ತಿದ್ದಾರೆ. ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ಗುರುಪುರದ ಶ್ರೀ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀವರ್ಚನಗೈದಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಹೇರಂಬ ಇಂಡಸ್ಟಿçÃಸ್ ಪ್ರೆöÊವೆಟ್ ಲಿಮಿಟೆಡ್ ಇದರ ಸಿಎಂಡಿ ಹಾಗೂ ಅಭಿಮತ ಟಿವಿಯ ಮುಖ್ಯ ಪ್ರವರ್ತಕರಾದ ಕನ್ಯಾನ ಸದಾಶಿವ ಶೆಟ್ಟಿಯವರು ವಹಿಸಿದ್ದಾರೆ. ಬಳಿಕ ಮಾತನಾಡಿ, ಯೋಗದಲ್ಲಿ ಬಂದ ಕರ್ತವ್ಯವನ್ನ ಮಾಡಿದಾಗ ಪರಮಾತ್ಮ ಖಂಡಿತ ಫಲ ನೀಡುತ್ತಾನೆ ಎಂದು ಉತ್ತಮ ಸಂದೇಶವನ್ನ ನೀಡಿದ್ದಾರೆ. ಯುವ ವಾಗ್ಮಿ ಹಾರಿಕಾ ಮಂಜುನಾಥ್ ಧಾರ್ಮಿಕ ಭಾಷಣ ಮಾಡಿದ್ದಾರೆ. ಇನ್ನು ಈ ಸಭೆಯಲ್ಲಿ
ಚಲನಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರಾದ ರವಿರಾಜ್ ಸಾಲೆತ್ತೂರು, ಎಂ.ಎ ಕನ್‌ಸ್ಟçಕ್ಷನ್ ಇಂಜಿನಿಯರ್ ಮತ್ತು ಬಿಲ್ಡಿಂಗ್ ಕಂಟ್ರಾಕ್ಟರ್, ಹಾಗೂ ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾಕ ಸಂಘದ ಅಧ್ಯಕ್ಷರಾದ ಎಂ ಮಹಾಬಲ ಕೊಟ್ಟಾರಿ, ಉದ್ಯಮಿಗಳಾದ ಲಯನ್ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ಅಭಿಮತ ಟಿವಿಯ ಆಡಳಿತ ಪಾಲುದಾರರಾದ ಡಾ.ಮಮತಾ ಪಿ ಶೆಟ್ಟಿ, ಅಲೆಮಾರಿ-ಅರೆ ಅಲೆಮಾರಿ ನಿಗಮದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಕಾಶ್ ಶೆಟ್ಟಿ ಉದ್ಯಮಿಗಳು, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಸತೀಶ್ ಕರ್ಕೇರ ಉದ್ಯಮಿಗಳು, ರಿಷಿ ಹಾಡ್ವೇðರ್ & ಪ್ಲೆöÊ ಕದ್ರಿ, ಮಂಗಳೂರು, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ,ಜ್ಯೋತಿ ಮಹಿಳಾ ಮಂಡಲ(ರಿ.) ಇದರ ಲಕ್ಷಿö್ಮÃ ಪ್ರಭು,ಜೆ. ಕೃಷ್ಣ ಪಾಲೇಮಾರ್, ಮಾಜಿ ಸಚಿವರು, ಕರ್ನಾಟಕ ಸರಕಾರ, ಆನಂದ ಆಳ್ವ ಗೋಳ್ತಮಜಲು, ಶ್ರೀಕಾಂತ್ ಶೆಟ್ಟಿ ಸಂಕೇಶ, ಉದ್ಯಮಿಗಳು, ನಾಗೇಶ್ ಕುಲಾಲ್ ನರಿಕೊಂಬು, ಎನ್.ಕೆ. ಕನ್ಸಲ್ಟೆಂಟ್ಸ್, ಪಾಣೆಮಂಗಳೂರು, ಸಂದೇಶ್ ಶೆಟ್ಟಿ, ಆಗ್ರಜ ಬಿಲ್ಡರ್ಸ್, ಮಂಗಳೂರು, ಅಜಯ್ ಪಿ. ಪಡೀಲ್, ಮ್ಹಾಲಕರು, ಸುರಭಿ ಗ್ರೂಪ್ ಆಫ್ ಹೋಟೆಲ್ಸ್, ಈಶ್ವರ್ ಮಲ್ಪೆ, ಸಾಮಾಜಿಕ ಕಾರ್ಯಕರ್ತರು, ಉಡುಪಿ ಮಲ್ಪೆ, ಸೋಮಪ್ಪ ಪೂಜಾರಿ ಅಮೂರು, ನಿವೃತ ಸೈನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ರು.
ಶ್ರೀ ಕೃಷ್ಣ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿದರು. ಶ್ರೀ ಕೃಷ್ಣ ಭಜನಾ ಮಂದಿರದ ಪ್ರಧಾನ ಕಾಂiÀiðದರ್ಶಿ ಕುಶಾಲಪ್ಪ ಅಮ್ಟೂರು ಪ್ರಸ್ತಾಪನೆ ಸಲ್ಲಿಸಿದರು. ರಾಧಾಕೃಷ್ಣ ಮಾಸ್ತರ್ ಧನ್ಯವಾದ ಸಮರ್ಪಿಸಿದ್ದು, ಸಂತೋಷ್ ಬೇಂಕ್ಯೆ ಹಾಗು ರಾಜೇಶ್ ಕೊಟ್ಟಾರಿ ನಿರೂಪಣೆ ಮಾಡಿದರು. ರಾತ್ರಿ ಗಂಟೆ 8ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದ್ದು, ರಾತ್ರಿ ಗಂಟೆ 9ರಿಂದ ಪಿಂಗಾರ ಕಲಾವೆದೆರ್ ಬೆದ್ರ ಇವರಿಂದ ತುಳು ಹಾಸ್ಯ ನಾಟಕ “ಕದಂಬ” ಪ್ರದರ್ಶನಗೊಂಡಿದೆ.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…
ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ಸಮೀಪದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟದಲ್ಲಿ ಕನಿಷ್ಠ 32 ಕಾರ್ಮಿಕರು…
ಬೀರತಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರತಮ್ಮನಹಳ್ಳಿ ಕೆರೆಗೆ ಕಿಡಿಗೇಡಿಗಳು ಕ್ರಿಮಿನಾಶಕ ವಸ್ತು ಹಾಕಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳ…