ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆಸಲಾಯಿತು.

ಈ ಚುನಾವಣೆಯಲ್ಲಿ ಒಟ್ಟು 10 ಸದಸ್ಯರನ್ನು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ 6 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು.
ಈ ಚುನಾವಣೆಯಲ್ಲಿ ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಮಹದೇವಮ್ಮ ರವರು 5 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿ. ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂದು ಚುನಾವಣಾ ಅಧಿಕಾರಿಯದ ಹಿತೇಂದ್ರ ತಿಳಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಗ್ರಾಮದ ಮುಖಂಡ ನಾಗರಾಜು ಮತ್ತು ಜೆಡಿಎಸ್ ಮುಖಂಡ ಪ್ರದೀಪ್ ಮಾತನಾಡಿ ಲಕ್ಷ್ಮಿಪುರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಮತನೀಡಿದ ಎಲ್ಲಾ ಸದಸ್ಯರಿಗೂ ಧನ್ಯವಾದವನ್ನು ತಿಳಿಸಿ. ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ನಾಗಮ್ಮ. ನಾಗರಾಜು. ನಾಗೇಂದ್ರ. ಪಾರ್ವತಮ್ಮ. ರಾಜೇಶ್. ಶಿವಣ್ಣ. ಕೃಷ್ಣ. ಭಾಗ್ಯ. ಸಣ್ಣ ಸ್ವಾಮಿ. ಹಾಗೂ ಹಾಲು ಉತ್ಪಾದಕ ಉತ್ಪಾದಕರ ಸಂಘದ ಕಾರ್ಯದರ್ಶಿ ಲಕ್ಷ್ಮಿ.ಚನ್ನಕೇಶವ ಮತ್ತಿತರರು ಹಾಜರಿದ್ದರು



