ಲಾಸ್ ಏಂಜಲೀಸ್‌ನಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಸಾವನ್ನಪ್ಪಿದವರ ಸಂಖ್ಯೆ ಶನಿವಾರ 16ಕ್ಕೆ ಏರಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.ಪಾಲಿಸೇಡ್ಸ್ ಅಗ್ನಿಶಾಮಕ ವಲಯದಲ್ಲಿ 5 ಮಂದಿಯ ಶವ ಪತ್ತೆಯಾಗಿದ್ದರೆ, ಮಂದಿ ಈಟನ್ ಅಗ್ನಿಶಾಮಕ ವಲಯದಿಂದ 11 ಮಂದಿಯ ಶವ ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.
ಪಾಲಿಸೇಡ್ಸ್ ನಲ್ಲಿ ಬೆಂಕಿಯು ಈಶಾನ್ಯಕ್ಕೆ ಹರಡುತ್ತಲೇ ಇದೆ. ಇದು ಬ್ರೆಂಟ್‌ವುಡ್ ಮತ್ತು ಬೆಲ್ ಏರ್‌ನಂತಹ ಶ್ರೀಮಂತ ದಕ್ಷಿಣ ಕ್ಯಾಲಿಫೋರ್ನಿಯಾ ನೆರೆಹೊರೆಗಳಲ್ಲಿ ಹೊಸ ಸ್ಥಳಗಳಿಗೆ ವಿಸ್ತರಣೆಗೆ ಕಾರಣವಾಗಿದೆ. ಲಾಸ್ ಏಂಜಲೀಸ್ ಪ್ರದೇಶದಾದ್ಯಂತ ಕಾಡ್ಗಿಚ್ಚು ಅನೇಕ ಮನೆಗಳನ್ನು ನಾಶಪಡಿಸಿದ್ದರಿಂದ ಅದನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ತಮ್ಮ ಕಾರ್ಯವನ್ನು ಬಿರುಸಿನಿಂದ ಮುಂದುವರಿಸಿದ್ದಾರೆ. ಪ್ರಬಲವಾದ ಗಾಳಿಯು ಒಣಗಿದ ಭೂಪ್ರದೇಶಗಳಲ್ಲಿ ಬೆಂಕಿಯು ಐದು ದಿನಗಳ ನಂತರವೂ ಮುಂದುವರಿದಿದೆ.

ವ್ಯಾಪಕವಾದ ವೈಮಾನಿಕ ಅಗ್ನಿಶಾಮಕ ಪ್ರಯತ್ನಗಳ ಹೊರತಾಗಿಯೂ, ಪಾಲಿಸೇಡ್ಸ್ ನಲ್ಲಿ ಬೆಂಕಿಯು ಶನಿವಾರದಂದು ನಗರದ ಪೂರ್ವಕ್ಕೆ ವಿಸ್ತರಿಸಿದೆ. ಗೆಟ್ಟಿ ಸೆಂಟರ್ ಕಲಾ ವಸ್ತುಸಂಗ್ರಹಾಲಯಕ್ಕೆ ಬೆಂಕಿ ಅವರಿಸುವ ಭೀತಿ ಎದುರಾಗಿದೆ ಮತ್ತು ಅದು ಉತ್ತರಕ್ಕೆ ಸ್ಯಾನ್ ಫೆರ್ನಾಂಡೊ ಕಣಿವೆಯ ಕಡೆಗೆ ತನ್ನ ಕೆನ್ನಾಲಿಗೆಯನ್ನು ಚಾಚಿದೆ. ಇಲ್ಲಿ 23,600 ಎಕರೆಗಳಷ್ಟು ಬೆಂಕಿ ಆವರಿಸಿದ್ದು, ಶೇ.11ರಷ್ಟು ಬೆಂಕಿಯನ್ನು ನಿಯಂತ್ರಿಸಲಾಗಿದೆ. ಆದರೆ ಈಟನ್ ನಲ್ಲಿ 14,000 ಎಕರೆಗಳನ್ನು ಸುಟ್ಟುಹಾಕಿದ್ದು, ಶೇ.15 ರಷ್ಟು ಬೆಂಕಿಯನ್ನು ನಿಯಂತ್ರಿಸಲಾಗಿದೆ.
ಲಾಸ್ ಏಂಜಲೀಸ್ ಸುತ್ತಮುತ್ತಲಿನ ಆರು ಪ್ರಮುಖ ಕಾಡ್ಗಿಚ್ಚುಗಳು ಸುಮಾರು 40,000 ಎಕರೆ ಕಾಡನ್ನು ಸುಟ್ಟುಹಾಕಿವೆ. ಮನೆಗಳು ಮತ್ತು ಇತರ ವ್ಯವಹಾರದ ಕಟ್ಟಡಗಳು ಸೇರಿದಂತೆ 12,000ಕ್ಕೂ ಹೆಚ್ಚು ಕಟ್ಟಡಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ ಶುಷ್ಕ ಗಾಳಿ ತೀವ್ರಗೊಳ್ಳುವ ಬೆದರಿಕೆ ಇರುವುದರಿಂದ ಅಧಿಕಾರಿಗಳು ಹೆಚ್ಚಿನ ಅಪಾಯಗಳ ಬಗ್ಗೆ ಎಚ್ಚರಿಸಿದ್ದಾರೆ.
ಈ ಕಾಡ್ಗಿಚ್ಚುಗಳು ಯುಎಸ್ ಇತಿಹಾಸದಲ್ಲಿ ಅತ್ಯಂತ ದುಬಾರಿಯಾಗಬಹುದು, ಹಾನಿ ಮತ್ತು ಆರ್ಥಿಕ ನಷ್ಟಗಳು $135 ಬಿಲಿಯನ್ ಮತ್ತು $150 ಬಿಲಿಯನ್ ನಡುವೆ ಇರಬಹುದು ಎಂದು ಆರಂಭಿಕ ಅಂದಾಜು ಹೇಳಿದೆ.
ನಾಯಿಗಳು, ಕುದುರೆಗಳು ಮತ್ತು ಜಾನುವಾರುಗಳು ಸೇರಿದಂತೆ ಸ್ಥಳಾಂತರಗೊಂಡ ಪ್ರಾಣಿಗಳಿಗೆ ಅವುಗಳ ಮಾಲೀಕರೊಂದಿಗೆ ಸಹಾಯ ಮಾಡಲು ರಕ್ಷಣಾ ಸಂಸ್ಥೆಗಳು ಮುಂದಾಗಿವೆ. ಸ್ವಯಂಸೇವಕರು ಬಿರುಸಿನ ಚಟುವಟಿಕೆಯಲ್ಲಿ ತೊಡಗಿ ನಿರಾಶ್ರಿತರಾದವರಿಗೆ ಆಹಾರ ನೀಡುತ್ತಿದ್ದಾರೆ. ಪ್ರಾಣಿಗಳು ಮತ್ತು ಜನರಿಗೆ ಆಹಾರ ಮತ್ತು ಸಾಮಗ್ರಿಗಳ ದೇಣಿಗೆಗಳು ಹರಿದು ಬರುತ್ತಿವೆ.
ಸ್ಥಳೀಯ ರೇಸ್ ಟ್ರ್ಯಾಕ್‌ನಲ್ಲಿ ಮನೆಗಳನ್ನು ಕಳೆದುಗೊಂಡು ಸ್ಥಳಾಂತರಗೊಂಡ ನಿವಾಸಿಗಳಿಗೆ ಬಟ್ಟೆ, ಕಂಬಳಿ ಮತ್ತು ಗೃಹೋಪಯೋಗಿ ವಸ್ತುಗಳಂತಹ ಅಗತ್ಯ ವಸ್ತುಗಳನ್ನು ಪೂರೈಸಲು ವಿಂಗಡಿಸುತ್ತಿರುವುದು ಕಂಡುಬರುತ್ತಿದೆ ಎಂದು ವರದಿಯಾಗಿದೆ. ಸರ್ಕಾರ ಇನ್ನೂ ಅಧಿಕೃತವಾಗಿ ಇಲ್ಲಿಯವರೆಗಿನ ಹಾನಿಯ ಅಂದಾಜು ನೀಡಿಲ್ಲವಾದರೂ, ಖಾಸಗಿ ಅಂದಾಜಿನ ಪ್ರಕಾರ ಒಟ್ಟು ಹಾನಿಯ ವೆಚ್ಚ ಹತ್ತಾರು ಶತಕೋಟಿ ಡಾಲರ್‌ಗಳನ್ನು ತಲುಪುತ್ತದೆ.



