ಹಾಸನ : ಪ್ರೀತಿಸಿದ ಹುಡುಗಿ ಹಾಗೂ ಪೊಲೀಸರ ನಡೆ ಬಗ್ಗೆ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವನ್ನಪ್ಪಿದ್ದಾನೆ. ಪ್ರೀತಿಸಿದ ಯುವತಿಯಿಂದ ಮನನೊಂದು ವಿಷ ಸೇವಿಸಿದ್ದ ಪ್ರಿಯಕರ ಚಿಕಿತ್ಸೆ ಫಲಿಸದೇ ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ (Sakleshpur) ತಾಲೂಕಿನ ಬಾಳೆಗದ್ದೆ ಗ್ರಾಮದ ಕವನ್ (30) ಆತ್ಮಹತ್ಯೆಗೆ ಶರಣಾದ ಯುವಕ. ಸಾಯುವ ಮುನ್ನ ಕವನ್ ಸಾವಿಗೆ ಕಾರಣ ತಿಳಿಸಿ ವೀಡಿಯೋ ಮಾಡಿಟ್ಟು ಒಂದು ವಾರದ ಹಿಂದೆ ವಿಷ ಸೇವಿಸಿದ್ದ. ನನ್ನ ಸಾವಿಗೆ ತಾನುಪ್ರೀತಿಸಿದ ಹುಡುಗಿ ಹಾಗೂ ವಿನಯ್ ಎಂಬಾತ ಕಾರಣ ಎಂದು ವಿಡಿಯೋದಲ್ಲಿ ಎಳೆಎಳೆಯಾಗಿ ಯುವಕ ಕಾರಣ ಬಿಚ್ಚಿಟ್ಟಿದ್ದಾನೆ. ಅಲ್ಲದೇ ಪೊಲೀಸರ ಕ್ರಮದ ಬಗ್ಗೆ ಅಸಮಾಧಾನ ಹೊರಹಾಕಿದ್ದಾನೆ.




