ಆಡುತ್ತಲೇ ಅಸುನೀಗಿದ ಹದಿಹರೆಯದ ಯುವಕ

ಮಂಗಳೂರು : ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಹದಿಹರೆಯದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಗರದ ಫಳ್ನೀರ್ ನಲ್ಲಿ ಜ. ೧೫ ನಡೆದಿದೆ.
ಅತ್ತಾವರ ಐವರಿ ನಿವಾಸಿಯಾಗಿರುವ, ಆದ್ದೂರು ಮೂಲದ ಷರೀಫ್ ರವರ ಪುತ್ರ ಶಹೀಮ್ (20) ಮೃತ ದುರ್ದೈವಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಯೋಜನವಾಗಲಿಲ್ಲ. ಶಹೀಮ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.



