ಹಸುವಿನ ಕೆಚ್ಚಲನ್ನು ಕಡಿದು ವಿಕೃತಿಯನ್ನು ಮೆರೆದ ದುಷ್ಟರ ನಡೆಯನ್ನು ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಂಗಳೂರಿನ ಮಿನಿ ವಿಧಾನಸೌಧ ಎದುರು ನಡೆದ ಪ್ರತಿಭಟನೆಯನ್ನು ಗೋ ಸಂರಕ್ಷಣಾ ಸಂವರ್ಧನ ಸಮಿತಿ ಆಯೋಜಿಸಿತ್ತು.ಗೋ ಪೂಜೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.

ಸಂಸದ ಬ್ರಿಜೇಶ್ ಚೌಟ , ಮುಖಂಡರಾದ ಪುರಾಣಿಕ್ ,ಕಿಶೋರ್ ಕುಮಾರ್ ಮತ್ತಿತರರು ಭಾಗಿಯಾಗಿದ್ದರು.ಕಾಂಗ್ರೆಸ್ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು ಹಿಂದೂ ಭಾವನೆಗಳನ್ನು ಹತ್ತಿಕ್ಕಲಾಗುತ್ತಿದೆ ಎಂದಾರೋಪಿಸಿದರು.



