ಮಂಗಳೂರು : ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮ ಸೇನೆಯಿಂದ ದಾಳಿ,ಪೀಠೋಪಕರಣ ಧ್ವಂಸ.!

ಮಂಗಳೂರು : ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮ ಸೇನಾ ಸಂಘಟನೆ ದಾಳಿ ನಡೆಸಿದ ಘಟನೆ ನಡೆದಿದೆ. ಮಂಗಳೂರಿನ ಬಿಜೈ ಕೆಎಸ್ಆರ್ ಟಿಸಿ ಬಳಿಯ ಮಸಾಜ್ ಸೆಂಟರ್ ಇದಾಗಿದ್ದು, ಪ್ರಸಾದ್ ಅತ್ತಾವರ ನೇತೃತ್ವದ ಶ್ರೀರಾಮ ಸೇನಾ ಸಂಘಟನೆ ನೇತೃತ್ವದಲ್ಲಿ ದಾಳಿ ನಡೆಸಿದೆ. ಮಸಾಜ್ ಸೆಂಟರ್ ನಲ್ಲಿ ಅನೈತಿಕ ಚಟುವಟಿಕೆ ಆರೋಪ ಕೇಳಿ ಬಂದಿದೆ.

ಮಸಾಜ್ ಸೆಂಟರ್ ಗೆ ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿದ್ದು ಮಸಾಜ್ ಸೆಂಟರ್ ನ ಗಾಜುಗಳನ್ನು ಪುಡಿಗೈದು ರಾಮಸೇನಾ ಆಕ್ರೋಶ ಹೊರಹಾಕಿದ್ದಾರೆ. ಮಂಗಳೂರಿನ ಬಿಜೈ ಬಳಿಯ ಕರ‍್ಸ್ ಹೆಸರಿನ ಮಸಾಜ್ ಪಾರ್ಲರ್ ಗೆ ದಾಳಿ ನಡೆಸಿದ್ದು, ಮಂಗಳೂರು ನಗರದಾದ್ಯಂತ ಇರೋ ಮಸಾಜ್ ಸೆಂಟರ್ ಗಳ ಮುಚ್ಚುವಂತೆ ರಾಮ ಸೇನಾ ಆಗ್ರಹಿಸಿದೆ.



