ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಹೊರೆಕಾಣಿಕೆ ಸಂಗ್ರಹಣಾ ಕಚೇರಿಯ ಉದ್ಘಾಟನಾ ಕಾರ್ಯಕ್ರಮವು ನಗರದ ಶರವು ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.

ಕಚೇರಿ ಉದ್ಘಾಟಿಸಿ ಮಾತನಾಡಿದ ಕಾಪು ಶ್ರೀ ಕ್ಷೇತ್ರದ ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ ತಾಯಿಯ ಅಪೇಕ್ಷೆ ಗಣಪತಿಯನ್ನು ಮುಂದಿಟ್ಟುಕೊಂಡು ಹೊರೆಕಾಣಿಕೆಗೆ ಸಿದ್ಧತೆ ಮಾಡಿ ಎನ್ನುವುದಾಗಿತ್ತು. ಅದೇ ರೀತಿ ಕಾಕತಾಳಿಯವೋ ಏನೋ ಪ್ರಥಮ ಕಚೇರಿ ಶರವು ಸಾನಿಧ್ಯದಲ್ಲಿ ನೆರವೇರಿದೆ ಎನ್ನುವುದು ತಾಯಿಯ ಪವಾಡಕ್ಕೆ ಸಾಕ್ಷಿ. ಭಕ್ತಾದಿಗಳು ಹೊರಕಾಣಿಕೆಗಳನ್ನು ಸಮರ್ಪಣೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.
ಬಳಿಕ ಮಾತನಾಡಿದ ಪದ್ಮರಾಜ್ ಪೂಜಾರಿ ಮದ್ಯಾಹ್ನ 1.30ಕ್ಕೆ ಹೊರೆಕಾಣಿಕೆಯ ಭವ್ಯ ಮೆರವಣಿಗೆ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಶರವು ಕ್ಷೇತ್ರ ಆಡಳಿತ ಮುಖ್ಯಸ್ಥ ರಾಘವೇಂದ್ರ ಶಾಸ್ತ್ರಿ, ಹೊರೆಕಾಣಿಕೆ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಬಂಟ್ವಾಳ, ಪ್ರದಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಪದೂರು ಮತ್ತಿತರರು ಉಪಸ್ಥಿತರಿದ್ದರು.



