ರೀಲ್ಸ್ ಮಾಡಲು ಹೋಗಿ ಆಯತಪ್ಪಿ ಬೆಟ್ಟದಿಂದ ಬಿದ್ದ ಯುವಕ..!!

ರೀಲ್ಸ್ ಹುಚ್ಚು ಯುವಸಮುದಾಯವನ್ನು ಬೆನ್ನು ಬಿಡದೇ ಕಾಡುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಗವಿಬೆಟ್ಟದಲ್ಲಿ ನಡೆದ ಒಂದು ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಹೌದು, ರೀಲ್ಸ್ ಮಾಡಲು ಹೋಗಿ ಯುವಕನೋರ್ವ ಆಯತಪ್ಪಿ ಬೆಟ್ಟದಿಂದ ಬಿದ್ದು, ಗಂಭೀರ ಸ್ವರೂಪದ ಗಾಯ ಮಾಡಿಕೊಂಡಿದ್ದಾನೆ. ಶನಿವಾರ ಸಂತೆಯಿAದ ತನ್ನ ಇಬ್ಬರು ಸ್ನೇಹಿತರ ಜೊತೆ ಗವಿಬೆಟ್ಟಕ್ಕೆ ಬಂದಿದ್ದ ರಾಶಿದ್ ಎಂಬ ಯುವಕ, ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ. ಈ ವೇಳೆ ಆಯತಪ್ಪಿ ಬೆಟ್ಟದ ಮೇಲಿಂದ ಸುಮಾರು ನೂರು ಅಡಿ ಆಳಕ್ಕೆ ಬಿದ್ದ ರಾಶಿದ್‌ನನ್ನು ಸ್ಥಳೀಯರು ರಕ್ಷಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಇದೀಗ ಶನಿವಾರ ಸಂತೆ ಆಸ್ಪತ್ರೆಯಲ್ಲಿ ರಾಶೀದ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




