ಜನ ಮನದ ನಾಡಿ ಮಿಡಿತ

Advertisement

ಸರಕಾರಿ ಪ್ರೌಢಶಾಲೆ ಎಲಿಮಲೆಗೆ ಸ್ಮಾರ್ಟ್ ಟಿವಿ/ಬೋರ್ಡ್ ಕೊಡುಗೆ

ಸರಕಾರಿ ಪ್ರೌಢಶಾಲೆ ಎಲಿಮಲೆಗೆ ಸ್ಮಾರ್ಟ್ ಟಿವಿ/ಬೋರ್ಡ್ ಕೊಡುಗೆ

 

ದಕ್ಷಿಣ ಕನ್ನಡ : ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಸಂಸ್ಥೆಯ ಸಂಯೋಜನೆಯಲ್ಲಿ ಐ ಟಿ ಸಿ ಆಶಿರ್ವಾದ್ ಸ್ಮಾರ್ಟ್ ಇಂಡಿಯಾ” ಸಹಭಾಗಿತ್ವದೊಂದಿಗೆ ಸರಕಾರಿ ಪ್ರೌಢ ಶಾಲೆಗೆ ದಿನಾಂಕ:20-02-2025 ನೇ ಗುರುವಾರರಂದು ಸ್ಮಾರ್ಟ್ ಟಿವಿ ಕೊಡುಗೆ ಹಾಗೂ ಅಯೋಡಿನ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಬಗೆಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಸಮಾಜ ಸೇವೆ ಮತ್ತು ಮಕ್ಕಳ ಆರೋಗ್ಯ ಎಂಬ ಧ್ಯೇಯದೊಂದಿಗೆ ಈ ಮೇಲಿನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಕ್ರಮ ಸಂಯೋಜಕರಾದ ಗಣೇಶ್ ಬಂಗಾಡಿ ಪ್ರಸ್ತಾವನೆ ಯೊಂದಿಗೆ ಆರಂಭಗೊಂಡಿತು, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಧನಂಜಯ ಬಾಳೆತೋಟ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ವರು ಸ್ಮಾರ್ಟ್ ಟಿವಿ ಹಾಗೂ ಆರೋಗ್ಯಕರ ಆಹಾರದ ಸಲಹೆ ಭಿತ್ತಿ ಚಿತ್ರವನ್ನು ಅನಾವರಣಗೊಳಿಸಿದರು. ಎಲಿಮಲೆ ಸಮುದಾಯ ಆರೋಗ್ಯ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಗಳಾದ ಕುಮಾರಿ ಮೋನಿಷಾ ಇವರು ಅಯೋಡಿನ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಬಗೆಗೆ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಸೇವಾಜೆ, ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಧ್ಯಕ್ಷರಾದ ರಾಜೇಶ್ ಅಂಬೆಕಲ್ಲು, ಐ ಜೆ ಡಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಗಣೇಶ್ ಬಂಗಾಡಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಕೆ, ಎಸ್ ಡಿ ಎಂ ಸಿ ಸದಸ್ಯರಾದ ಪುರುಷೋತ್ತಮ , ಕೃಷ್ಣಪ್ಪ ಗೌಡ ಹರ್ಲಡ್ಕ, ಮಾಧವ ಶೀರಡ್ಕ, ಅಚ್ಚುತ ಮುಂಡೋಕಜೆ,ವಿಶಾಲಾಕ್ಷಿ, ಲೀಲಾವತಿ ಹರ್ಲಡ್ಕ ಉಪಸ್ಥಿತರಿದ್ದರು.

ಐ ಜಿ ಡಿ ಸಂಸ್ಥೆಯ ತಾಲೂಕು ಸಂಯೋಜಕರಾದ ಜ್ಞಾನೇಶ್(ಸುಳ್ಯ), ಪ್ರಜ್ಞಾ (ಕಡಬ), ಪವಿತ್ರ (ಪುತ್ತೂರು) ರಮಿತ (ಬೆಳ್ತಂಗಡಿ), ಚೈತ್ರ (ಮಂಗಳೂರು). ದೇವಚಳ್ಳ ಗ್ರಾಮ ಪಂಚಾಯತ್ ಗ್ರಂಥಪಾಲಕರಾದ ಪ್ರಫುಲ್ಲ ಶ್ರೀಕಾಂತ್ ಪಾರೆಪ್ಪಾಡಿ, ಕೇಶವ ಕಾಯರ ,ಶಿಕ್ಷಕರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಮುರಳೀಧರ ಪುನುಕುಟ್ಟಿ ಸ್ವಾಗತಿಸಿ ,ರಮಿತ ಧನ್ಯವಾದ ಅರ್ಪಿಸಿದರು ಕುಮಾರಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!