ಗಾನವಿ ಪೂಜಾರಿ ಅಮನಬೆಟ್ಟು ಮಾರ್ನಾಡು ಮೂಡುಬಿದಿರೆ
ಗಾನವಿ ಪೂಜಾರಿಯವರ ತಂದೆಯ ಹೆಸರು ಸುರೇಂದ್ರ ಸಿ ಪೂಜಾರಿ ತಾಯಿ ಆಶಾ ಸುರೇಂದ್ರ ಪೂಜಾರಿ. ಇವರು ಅಡ್ಕರೆ ಅಮನಬೆಟ್ಟು ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಅಲಂಗಾರಿನಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇವರು ಮಹಾಮಾಯಿ ಭಜನಾ ಮಂಡಳಿ ಕೋಟೆಬಾಗಿಲಿನ ಭಜಕಿ. ಇವರು ಅಶೋಕ್ ನಾಯಕ್ ಕಳಸಬೈಲು ಇವರೊಂದಿಗೆ ಕುಣಿತ ಭಜನೆ ಕಲಿಯುತ್ತಾ ಇದ್ದಾರೆ. ಇಷ್ಟರ ತನಕ ಸಾರ್ವಜನಿಕ ವಲಯದಲ್ಲಿ 39 ಕಡೆ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಇವರಿಗೆ ಸಂಗೀತದಲ್ಲಿ ಆಸಕ್ತಿ ಇದ್ದು, ತುಳಸಿ ಪೆಜತ್ತಾಯ ಇವರ ಬಳಿ ಸಂಗೀತವನ್ನು ಕಲಿಯುತ್ತಾ ಇದ್ದಾರೆ. ಇವರು ಯಕ್ಷಗಾನ,ಕಥೆ ಹೇಳುವುದು, ಕುಣಿತ ಭಜನೆ, ಏಕಪಾತ್ರ ಅಭಿನಯ, ಭಕ್ತಿಗೀತೆ, ಸಂಗೀತ, ನೃತ್ಯದಲ್ಲಿ ಆಸಕ್ತಿಯನ್ನು ಹೊಂದಿರುತ್ತಾಳೆ. ಇವಳು ಏಕಪಾತ್ರ ಅಭಿನಯದಲ್ಲಿ ನಟಿಸಿ ಪ್ರೋತ್ಸಾಹ ಮತ್ತು ಬಹುಮಾನವನ್ನು ಗಳಿಸಿರುತ್ತಾರೆ. ಕಳೆದ ವರ್ಷ ಪ್ರತಿಭಾ ಕಾರಂಜಿಯಲ್ಲಿ ನಡೆದ ತಾಲೂಕು ಮಟ್ಟದ ಕಥೆ ಹೇಳುವುದರಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಇವರು ರಾಜ್ಯ ಮಟ್ಟದ ಕುಣಿತ ಭಜನೆಯಲ್ಲಿ ಭಾಗವಹಿಸಿರುತ್ತಾರೆ. ಸಾರ್ವಜನಿಕ ವಲಯದಲ್ಲಿ ನಡೆಯುವ ಗಣೇಶೋತ್ಸವ ಅಥವಾ ಶಾರದೋತ್ಸವ ಇರಬಹುದು ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಮುಖ್ಯಸ್ಥರಾದ ಪದ್ಮಶ್ರೀ ಮೇಡಂ ಇವರ ನೇತ್ರತ್ವದಲ್ಲಿ ನಡೆದ ಹಲವಾರು ಕಡೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ ಹಾಗೂ ಅಭಿನಂದನೆ ಪತ್ರವನ್ನು ಪಡೆದಿರುತ್ತಾರೆ. ವಾಯ್ಸ್ ಆಫ್ ಆರಾಧನಾ ವತಿಯಿಂದ ನಡೆಯುವಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಷ್ಟರ ತನಕ 28 ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಎಲ್ಲರ ಮೆಚ್ಚುಗೆಯನ್ನು ಪಡೆದಿರುತ್ತಾರೆ. ಅಭಿಮತ ಮಾಧ್ಯಮದಲ್ಲಿ ಪ್ರತಿಭಾ ಲೋಕದಲ್ಲಿ ಭಾಗವಹಿಸಿ ಹಾಗೂ ಪ್ರತಿಭಾಚುಕ್ಕಿ ಕಾರ್ಯಕ್ರಮದಲ್ಲಿ ಒಳ್ಳೆಯ ಮಾತುಗಾರಿಕೆಯಿಂದ ಅಭಿನಂದನೆ ಪತ್ರ ಸಿಕ್ಕಿರುತ್ತದೆ. ಮೈಸೂರಿನಲ್ಲಿ ನಡೆದಂತಹ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿರುತ್ತಾರೆ. ಹಾಗು ಈ ವರ್ಷ ಇವಳಿಗೆ ಕಲಾ ರತ್ನ ಪ್ರಶಸ್ತಿ ಲಭಿಸಿರುತ್ತದೆ. ಹಾಗು ರಾಜ್ಯಮಟ್ಟದ ಮಕ್ಕಳ ಹಬ್ಬ ದಲ್ಲಿ ಭಾಗವಹಿಸಿರುತ್ತಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…