ರಿಧಿ ಪಿ ಬಂಗೇರ ಕೋಟೆಬಾಗಿಲು ಮೂಡಬಿದಿರೆ

ಇವರು ಶ್ರೀ ಪ್ರದೀಪ್ ಗಾಣಿಗ ಹಾಗೂ ಶ್ರೀಮತಿ ರೂಪ ದಂಪತಿಗಳ ಪ್ರಥಮ ಪುತ್ರಿಯಾಗಿದ್ದು, ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡಬಿದರೆ ಇಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲ ಪ್ರತಿಭೆ. ಈಕೆ ನೃತ್ಯ, ಹಾಡು, ಚಿತ್ರಕಲೆ, ಕುಣಿತ ಭಜನೆ ಹಾಗು ಭರತನಾಟ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಭರತನಾಟ್ಯವನ್ನು ಶ್ರೀಮತಿ ಸುಖಧಾ ಭಾರ್ವೆ ಅವರಲ್ಲಿ ಕಲಿಯುತ್ತಿದಾರೆ. ಶಾಲೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಅಂಗವಾದ ಬುಲ್ – ಬುಲ್ ವಿಭಾಗದ ಅಂತಿಮ ಪರೀಕ್ಷೆಯಾದ ಗೋಲ್ಡನ್ ಆರೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ ಕೀರ್ತಿ ಇವರದ್ದು. ಚಿತ್ರಕಲೆಯಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ. ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕನ್ನಡ ಕಂಠಪಾಠದಲ್ಲಿ ತೃತೀಯ ಬಹುಮಾನಗಳಿಸಿದ ಕೀರ್ತಿ ಇವರಿಗಿದೆ. ಶಾಲೆಯಲ್ಲಿ ಸಾಮಾನ್ಯ ಪ್ರಾವೀಣ್ಯತೆ ಪ್ರಶಸ್ತಿ ಪಡೆದಿರುವ ಹೆಮ್ಮೆಯ ಬಾಲ ಪ್ರತಿಭೆ. ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಕೀರ್ತಿ ಇವರಿಗಿದೆ. ಹಲವಾರು ಕುಣಿತ ಭಜನೆ ಕಾರ್ಯಕ್ರಮ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ. ಅಭಿಮತ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಭಾ ಚುಕ್ಕಿ, ಪ್ರತಿಭಾ ಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಆಕ್ಸಿಸ್ ಮ್ಯಾಕ್ಸ್ ವತಿಯಿಂದ ಕೊಡಲ್ಪಡುವ ಬಾಲ ರತ್ನ ಪ್ರಶಸ್ತಿಯನ್ನು ಗಳಿಸಿರುವ ಗಾಣಿಗ ಸಮಾಜದ ಹೆಮ್ಮೆಯ ಬಾಲ ಪ್ರತಿಭೆ.ವಾಯ್ಸ್ ಆಫ್ ಆರಾಧನಾ ವತಿಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶುಭನುಡಿಗಳನ್ನು ಹೇಳುವ ಮೂಲಕ ಎಲ್ಲರ ಮನೆಮಾತದ ಪ್ರತಿಭೆ.



