ಅತ್ಮೀಯತೆ ಪ್ರದರ್ಶಿಸಿದ ಬಿಜೆಪಿ ಮುಖಂಡರ ಸಿಎಂ ಭೇಟಿ
ಸದಾ ಒಬ್ಬರನ್ನೊಬ್ಬರು ಬೈದಾಡಿಕೊಳ್ಳುತ್ತಿದ್ದ ಬಿಜೆಪಿ – ಕಾಂಗ್ರೆಸ್ ನಾಯಕರು ಇಂದು ಸಿಎಂ ಸಿದ್ದರಾಮಯ್ಯರವರ ಅರೋಗ್ಯ ವಿಚಾರಿಸಲು ಕಾವೇರಿ ನಿವಾಸದಲ್ಲಿ ಒಂದಾಗಿದ್ದಾರೆ. ಮಂಡಿನೋವಿನಲ್ಲಿ ಬಳಲುತಿದ್ದ ಸಿಎಂನ ಅರೋಗ್ಯ ವಿಚಾರಿಸಿದರು. ವಿಜಯೇಂದ್ರ ಮುಖ್ಯಮಂತ್ರಿಯವರಿಗೆ ಶಾಲು ಹೊದೆಸಿ ಸನ್ಮಾನಿಸಿದರೆ, ಅಶೋಕ ಬೃಹತ್ ಗಾತ್ರದ ಬೋಕೆ ನೀಡಿದರು. ಸಿದ್ದರಾಮಯ್ಯನವರು ವಿಜಯೇಂದ್ರ ಬೆನ್ನುತಟ್ಟ ಆತ್ಮೀಯತೆ ಪ್ರದರ್ಶಿಸಿದರು. ಶಾಸಕರಾದ ರಾಮಮೂರ್ತಿ, ಭೈರತಿ ಬಸವರಾಜ, ಕೆ.ಗೋಪಾಲಯ್ಯ, ಎಂ ಕೃಷ್ಣಪ್ಪ, ಎಸ್ಆರ್ ವಿಶ್ವನಾಥ್, ಮುನಿರತ್ನ, ಉದಯ ಗರುಡಾಚಾರ್, ಎಸ್ ರಘು, ರವಿಸುಬ್ರಮಣ್ಯ ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ ಕೇಶವಪ್ರಸಾದ್ ಮೊದಲಾದವರ ಸಿಎಂರನ್ನು ಭೇಟಿಯಾದರು.



