ಉತ್ತರಾಖಂಡದಲ್ಲಿ ಭಾರಿ ಹಿಮಪಾತ: 57 ಕಾರ್ಮಿಕರು ಸಿಲುಕಿರುವ ಸಂದೇಹ

ಚಮೋಲಿ : ಉತ್ತರಾಖಂಡ ಜಿಲ್ಲ್ಲೆಯ ಮಾನಾ ಬಳಿ ಫೆ. 28ರಂದು ಸಂಭವಿಸಿದ ಭಾರಿ ಹಿಮಪಾತದಲ್ಲಿ ಗಡಿ ರಸ್ತೆಗಳ ಸಂಸ್ಥೆಯ ಕನಿಷ್ಠ 57 ಮಂದಿ ಕಾರ್ಮಿಕರು ಸಿಕ್ಕಿಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ರಸ್ತೆ ಕೆಲಸದಲ್ಲಿ ತೊಡಗಿದ್ದ 57 ಕಾರ್ಮಿಕರು ಹಿಮದಡಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ 10 ಜನರನ್ನು ರಕ್ಷಿಸಿ ಮನ ಬಳಿಯ ಸೇನಾ ಶಿಬಿರಕ್ಕೆ ಕಳುಹಿಸಿಸಲಾಗಿದೆ ಎಂದು ಪೊಲೀಸ್ ವಕ್ತರ ನೀಲೇಶ್ ಆನಂದ್ ಭರ್ನೆ ತಿಳಿಸಿದರು.
ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ತಂಡ ತಲುಪಲು ತೊಂದರೆ ಎದುರಿಸುತ್ತಿದೆ. ಈಗಾಗಲೇ 4 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.



