ಧಗಧಗನೇ ಹೊತ್ತಿ ಉರಿದ ಮೆಡಿಕಲ್ ವೇಸ್ಟ್

ಉಡುಪಿ : ಉಡುಪಿಯಲ್ಲಿ ಭಾರಿ ಪ್ರಮಾಣದ ಮೆಡಿಕಲ್ ವೇಸ್ಟ್ಗೆ ಬೆಂಕಿ ಹಚ್ಚಿದ ಪರಿಣಾಮ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ. ರಾಸಾಯನಿಕ ಸುಟ್ಟ ಕಾರಣ ದುರ್ನಾತ ತಡೆಯಲಾರದೇ ಮನೆಗಳಿಂದ ಜನರು ಓಡಿ ಹೊರಬಂದಿದ್ದಾರೆ.
ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಲಗಿರಿಯ ಲಕ್ಷ್ಮಿ ನಗರದಲ್ಲಿ ಘಟನೆ ನಡೆದಿದ್ದು, ಮೆಡಿಕಲ್ ವೇಸ್ಟ್ ತಂದು ಬೆಂಕಿ ಹಚ್ಚಿದ್ದ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಡಿಕಲ್ ವೇಸ್ಟ್ ಸುತ್ತ ಮುತ್ತ ಅಪಾಯಕಾರಿ ರಾಸಾಯನಿಕದ ವಾಸನೆ ಹರಡಿ ಜನರಿಗೆ, ಉಸಿರುಗಟ್ಟಿದ ವಾತಾವರಣ ನಿರ್ಮಾಣಗೊಂಡು ಕಂಗಲಾಗಿದ್ದರು. ನೋಡು ನೋಡುತ್ತಲೇ ಭಾರಿ ಪ್ರಮಾಣದ ಮೆಡಿ ವೇಸ್ಟ್ ಗೆ ಬೆಂಕಿ ಹಬ್ಬಿಕೊಂಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದರೂ ಸುತ್ತಮುತ್ತಲಿನ ಜನ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. 200 ಮನೆಗಳಿಗೂ ಅವರಿಸಿದ ದುರ್ನಾತದಿಂದ ಸ್ಥಳೀಯರು ಬೆಂಕಿ ಹಚ್ಚಿದವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.



