ಮಹಿಳಾ ದಿನಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ;ಎಂ.ಸುOದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನ ಕೊಂಬೆಟ್ಟುನಲ್ಲಿ ಆಯೋಜನೆ

ಪುತ್ತೂರು : ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ಎಂ.ಸುOದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಾರ್ಚ್ 11 ರಂದು ಮಹಿಳಾ ದಿನಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು, ಪುತ್ತೂರು ತಾಲೂಕು ಸಮಿತಿ, ಬಂಟರ ಸಂಘ ಪುತ್ತೂರು ತಾಲೂಕು (ರಿ.) ಇದರ ಮಾರ್ಗದರ್ಶನದೊಂದಿಗೆ ಮಹಿಳಾ ಬಂಟರ ವಿಭಾಗ, ಬಂಟರ ಸಂಘ ಪುತ್ತೂರು ತಾಲೂಕು ಇದರ ಸಾರಥ್ಯದಲ್ಲಿ ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗ ಬಂಟರ ಸಂಘ ಪುತ್ತೂರು ತಾಲೂಕು ಇವರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜನೆಗೊಂಡಿದೆ.
ಬೆಳಗ್ಗೆ ಪುತ್ತೂರು ಮಹಿಳಾ ಬಂಟರ ವಿಭಾಗದ ಭಜನಾ ತಂಡದ ಉದ್ಘಾಟನೆ ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಶ್ರೀಮತಿ ಸೌಪರ್ಣಿಕ ಗುರುರಾಜ್ ರೈ ಈಶ್ವರಮಂಗಲ ಇವರಿಂದ ಗಣಪತಿ ತಾಳಂ ನಡೆಯಲಿದ್ದು, ತದನಂತರ ಮಹಿಳಾ ವಿಭಾಗ ಪುತ್ತೂರು ಇವರಿಂದ ಜಾನಪದ ನೃತ್ಯ ನಡೆಯಲಿದೆ. 11:30 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 2:30 ರಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಪೂರ್ಣಿಮ ಯತೀಶ್ ರೈ ಚೆಲ್ಯಡ್ಕ, ನುಳಿಯಾಲು ಇವರ ನಿರ್ದೇಶನದಲ್ಲಿ ಮಹಿಳಾ ಬಂಟರ ವಿಭಾಗ ಪುತ್ತೂರು ಹಾಗೂ ಅತಿಥಿ ಕಲಾವಿದೆಯರ ಕೂಡುವಿಕೆಯಲ್ಲಿ ಯಕ್ಷಗಾನ `ಮಹಿಷಮರ್ದಿನಿ’ ಪ್ರದರ್ಶನಗೊಳ್ಳಲಿದೆ.



