ಸುರತ್ಕಲ್ ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಮಾ.13ರಿಂದ 15ರವರೆಗೆ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ.

ಮಾ.13ರಂದು ರಾತ್ರಿ ಗಂಟೆ 9ಕ್ಕೆ ಸರಿಯಾಗಿ ಪಡ್ರೆ ಶ್ರೀ ಧೂಮಾವತಿ ದೈವಗಳ ಭಂಡಾರ ಮುಕ್ಕ ಭಂಡಾರ ಮನೆಯಿಂದ ಬಂದು ಪಡ್ರೆ ಶ್ರೀ ಧೂಮಾವತಿ ಬಂಟ ದೈವಸ್ಥಾನದಲ್ಲಿ ಧ್ವಜಾರೋಹಣ ಹಾಗೂ ದೀಪಾರಾಧನೆ ಬಲಿ ನಡೆಯಲಿದೆ. ಮಾ.14ರಂದು ಮಧ್ಯಾಹ್ನ ಗಂಟೆ 1ರಿಂದ ಸಂಜೆ 4ರ ತನಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ದಿ.ಶ್ರೀಧರ ಕೆ. ಅಮೀನ್ ಸ್ಮರಣಾರ್ಥ ಶ್ರೀಮತಿ ಆಶಾ ಅಮಿನ್ ಮಂಗಳೂರು ಇವರ ವತಿಯಿಂದ ರಾತ್ರಿ ಗಂಟೆ 7;30ಕ್ಕೆ ಹೂವಿನ ಪೂಜೆ ಮತ್ತು ಕಾಲಾವಧಿ ಜಾತ್ರೆ ನಡೆಯಲಿದೆ. ಮ.15ರಂದು ಸಂಜೆ 4ಗಂಟೆಗೆ ಸರಿಯಾಗಿ ಬಾಕಿಮಾರು ಚೆಂಡು, ರಾತ್ರಿ ದೀಪರಾಧನೆ, ಬಲಿ, ಧ್ವಜಾವರೋಹಣ ಹಾಗು ಭಂಡಾರ ನಿರ್ಗಮನ ನಡೆಯಲಿದೆ. ಈ ದೈವಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಯಾಗುವಂತೆ ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿನಂತಿಸಿಕೊAಡಿದ್ದಾರೆ. ಇನ್ನು ಈ ಕಾಲಾವಧಿ ಜಾತ್ರೋತ್ಸವದ ದೃಶ್ಯಾವಳಿಗಳು ಅಭಿಮತ ಟಿವಿ ಯೂಟ್ಯುಬ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.



