ಗುರುಪುರ ಬಂಟರ ಮಾತೃ ಸಂಘದ ವತಿಯಿಂದ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನ ಕುಕ್ಕುದಕಟ್ಟೆ ಗುರುಪುರ ಇದರ ಆಶ್ರಯದಲ್ಲಿ ದಶಮಾನೋತ್ಸವ ಸಮಾರಂಭವು ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು- ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಹಾಗೂ ಮಂಗಳೂರು – ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ವಾಮಂಜೂರು ಚರ್ಚ್ ಸಭಾಭವನದಲ್ಲಿ ನಿನ್ನೆ ನಡೆಯಿತು.

ಸಾಧಕರಿಗೆ ಸನ್ಮಾನ, ವಾರ್ಷಿಕ ಮಹಾಸಭೆ, ಯುವ ಸಂಭ್ರಮ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಿಧ್ಯಾರ್ಥಿ ಪುರಸ್ಕಾರ ಕಾರ್ಯಕ್ರಮಗಳು ಜರಗಿದವು. ಈ ಸಂದರ್ಭ ಬಂಟರ ಸಂಘ ಸಾಲೆತ್ತೂರು ವಲಯದ ಕಲಾವಿದರು ಗುರುಪುರ ಬಂಟರ ಮಾತೃ ಸಂಘದ ಆತಿಥ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.






