ಅದ್ಯಪಾಡಿ ಶ್ರೀ ಆದಿನಾಥೇಶ್ವರ ಕ್ಷೇತ್ರ ತುಳು ನಾಡಿನ ಬಹಳ ಕಾರ್ಣಿಕತೆಯ ಸಾನಿಧ್ಯವಾಗಿದ್ದು, ಉಬ್ಬಸ ಅಸ್ತಮಾ ರೋಗ ಶಮನ ಮಾಡುವಂತಹ ಶಕ್ತಿ ಈ ಕ್ಷೇತ್ರದಲ್ಲಿದೆ. ಇದೀಗ ಇಂತಹ ಪುಣ್ಯ ದೇವಸ್ಥಾನದಲ್ಲಿ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವರ ತ್ರಿದಳ ಪ್ರಿಯಾರ್ಚಿತ ಸಾಂಬ ತ್ರಯಂಬಕ ಎನ್ನುವ ಭಕ್ತಿಗೀತೆ ಬಿಡುಗಡೆಗೊಂಡಿದೆ.

ಪುತ್ತೂರು ಜಗದೀಶ ಆಚಾರ್ಯ ಸಂಗೀತ ನಿರ್ದೇಶನ ಹಾಗೂ ಗಾಯನದಲ್ಲಿ ಹಾಗೂ ದಿವಂಗತ ಪದ್ಮನಾದ ಆಳ್ವ ಕೊಲ್ಲೊಟ್ಟು ಇವರ ಸ್ಮರಣಾರ್ಥ ಶ್ರೀಮತಿ ಶಾಲಿನಿ ಮತ್ತು ಶ್ರೀ ಯದುನಾಥ ಆಳ್ವ ಕೊಲ್ಲೊಟ್ಟು ಇವರ ನಿರ್ಮಾಣದಲ್ಲಿ ಭಕ್ತಿಗೀತೆ ಮೂಡಿಬಂದಿದೆ. ಈ ಸಂದರ್ಭದಲ್ಲಿ ದೇವಳದ ಅರ್ಚಕರಾದ ಮಹೇಶ್ ಭಟ್ ಅದ್ಯಪಾಡಿ, ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರೀಶ್ ಶೆಟ್ಟಿ ಏತ ಮೊಗರು ದೊಡ್ಡಮನೆ, ದೇವಳದ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಸುಜಿತ್ ಆಳ್ವ ಏತಮೊಗರು ಗುತ್ತು, ಹಿರಿಯರಾದ ರಮಾನಾಥ ಅತ್ತರ್, ರಾಜೀವ ಆಳ್ವ ಅದ್ಯಪಾಡಿ ಗುತ್ತು ಹಾಗೂ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ರು.



