ಮೂಲ್ಕಿ: ಪಂಜ ಕೊಯಿಕುಡೆ ಶ್ರೀ ಶನೈಶ್ಚರ ಮಂಡಳಿಯ ವಾರ್ಷಿಕ ಶನಿ ಪೂಜಾ ಮಹೋತ್ಸವವು ಮಾ.8ರ ಶನಿವಾರ ನಡೆಯಿತು.

ಪಂಜ ವಾಸುದೇವ ಭಟ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನೆರವೇರಿತು.ಶ್ರೇಷ್ಠ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿ, ಕದ್ರಿ ನವನೀತ್ ಶೆಟ್ಟಿ, ಸೀತಾರಾಮ್ ಕುಮಾರ್ ಕಟೀಲ್, ಡಾ.ಪ್ರಖ್ಯಾತ್ ಶೆಟ್ಟಿ, ವಸಂತ ದೇವಾಡಿಗ ಇವರೆಲ್ಲರೂ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶನೇಶ್ವರನ ಕತೆಯನ್ನು ಪ್ರದರ್ಶಿಸಿದ್ದಾರೆ.

ಶ್ರೀ ಜಾರಂದಾಯ ಮಹಿಳಾ ಮಂಡಳಿ ನವಜ್ಯೋತಿ ಮಹಿಳಾ ಮಂಡಳಿ ಪಂಜ ಹಾಗೂ ಪಂಜ ವಿಠೋಬಾ ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ ನಡೆಯಿತು.ಮಧ್ಯಾಹ್ನ ಜಿಲ್ಲಾ ಪ್ರಶಸ್ತಿ ವಿಜೇತ ಪದ್ಮನಾಭ ಶೆಟ್ಟಿ, ಕ್ರೀಡಾ ಪಟುಗಳಾದ ಪವಿತ್ರಾ, ಪ್ರತೀಕ್ಷಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಪ್ರಾಥಮಿಕ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.ಮಂಡಳಿಯ ಗೌರವಾಧ್ಯಕ್ಷ ವಾಸುದೇವ್ ಭಟ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ನಲ್ಯಗುತ್ತು ವಸಂತ ಶೆಟ್ಟಿ, ಬರ್ಕೆ ರಘುರಾಮ ಶೆಟ್ಟಿಮಂಡಳಿ ಅಧ್ಯಕ್ಷ ನವೀನ್ ಶೆಟ್ಟಿ ಪಾದೆಮನೆ,ಬಾಲಕೃಷ್ಣ ಮೊಯ್ಲಿ, ಸತೀಶ್ ಶೆಟ್ಟಿ ಪಂಜದಗುತ್ತುಸತೀಶ್ ಶೆಟ್ಟಿ ಬೈಲಗುತ್ತು,ಕೆಮ್ರಾಲ್ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಪಂಜ ಎಲ್ಲರೂ ಉಪಸ್ಥಿತರಿದ್ದರು. ಪಂಜ ವಾಸುದೇವ ಭಟ್ ಪ್ರಾರ್ಥಿಸಿದರು.ನಿತೇಶ್ ದೇವಾಡಿಗ ಸನ್ಮಾನ ಪತ್ರ ವಾಚಿಸಿದರು.ಭಾಸ್ಕರ ಶೆಟ್ಟಿ ನಿರೂಪಿಸಿದರು.



