ಜನ ಮನದ ನಾಡಿ ಮಿಡಿತ

ಇತ್ತೀಚಿನ ಸುದ್ದಿ
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…! ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…! ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..! ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!
Advertisement

ಕಾಸರಗೋಡು: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ, ಆಟೋ ಚಾಲಕ ನೇಣು ಬಿಗಿದೆ ಸ್ಥಿತಿಯಲ್ಲಿ ಪತ್ತೆ..!

ಕಾಸರಗೋಡು: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ, ಆಟೋ ಚಾಲಕ ನೇಣು ಬಿಗಿದೆ ಸ್ಥಿತಿಯಲ್ಲಿ ಪತ್ತೆ..!

 

ಕಾಸರಗೋಡು : ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಗೂ ಆಟೋ ರಿಕ್ಷಾ ಚಾಲಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕಯ್ಯಾರ್ ಮಂಡೆಕಾಪು ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಮಂಡೆಕಾಪುವಿನ ಪ್ರಿಯೇಶ್ ಚಂದ್ರಾವತಿ ದಂಪತಿ ಪುತ್ರಿ ಶ್ರೇಯಾ [15] ಮತ್ತು ಆಟೋ ಚಾಲಕ ಪ್ರದೀಪ್ [42] ಎಂದು ಗುರುತಿಸಲಾಗಿದೆ.

ಮನೆಯಿಂದ ಅರ್ಧ ಕಿ. ಮೀ ದೂರದ ಕಾಡಿನಲ್ಲಿ ಆದಿತ್ಯವಾರ ಬೆಳಿಗ್ಗೆ 10.30 ರ ವೇಳೆಗೆ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದ್ದರು . ಆದರೆ ತಿಂಗಳಾಗುತ್ತಾ ಬಂದರೂ ಇಬ್ಬರ ಬಗ್ಗೆ ಯಾವುದೇ ಸುಳಿವು ಲಭಿಸದ ಹಿನ್ನಲೆಯಲ್ಲಿ ಶನಿವಾರದಿಂದ ಪೊಲೀಸರು ಹಾಗೂ ಸ್ಥಳೀಯರು ಮನೆ ಪರಿಸರದ ಕಾಡು ಕೇಂದ್ರೀಕರಿಸಿ ಶೋಧ ನಡೆಸಿದ್ದು, ಇಬ್ಬರ ಮೃತದೇಹ ಒಂದೇ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಎರಡು ಮೊಬೈಲ್ ಫೋನ್, ಒಂದು ಕತ್ತಿ ಪತ್ತೆಯಾಗಿದೆ.

ಫೆಬ್ರವರಿ 11 ರ ರಾತ್ರಿಯಿಂದ ಶ್ರೇಯಾ ದಿಢೀರ್ ನಾಪತ್ತೆಯಾಗಿದ್ದಳು. ಇದರ ಜೊತೆಗೆ ಪ್ರದೀಪ್ ನಾಪತ್ತೆಯಾಗಿದ್ದು ಇಬ್ಬರು ಪರಾರಿಯಾಗಿರಬಹುದೆಂದು ಶಂಕಿಸಲಾಗಿತ್ತು. ಮೊಬೈಲ್ ಟವರ್ ಕೇಂದ್ರೀಕರಿಸಿ ಮನೆ ಪರಿಸರ ಕಾಡು ಹಾಗೂ ಮನೆ ಕೇಂದ್ರೀಕರಿಸಿ ತನಿಖೆ ನಡೆಸಿದ್ದರು.ಪ್ರದೀಪ್ ನ ಸಂಬಂಧಿಕರಾದ ಮಡಿಕೇರಿ ಗೂ ತೆರಳಿ ಪೊಲೀಸರು ಈ ಹಿಂದೆ ತನಿಖೆ ನಡೆಸಿದ್ದರು. ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದರು. ಶ್ರೇಯಾ ಸ್ಥಳೀಯ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಳು.

Leave a Reply

Your email address will not be published. Required fields are marked *

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!

ಉಡುಪಿ: ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ….!

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಬಸವನಗುಡಿ ಎಂಬಲ್ಲಿ ಸ್ಕೂಟರ್‌ಗೆ ಕೆ.ಎಸ್ ಆರ್ ಟಿಸಿ ಬಸ್ ಡಿ*ಕ್ಕಿ….!

ನಾಟೇಕಲ್: ಮನೆ ಗೋಡೆಗೆ ಹಾರಿ ಬಡಿದ ಕಾರು; ಪಾರಾದ ಪ್ರಯಾಣಿಕರು….!

error: Content is protected !!