ಅಕ್ರಮ ಮರುಳುಗಾರಿಕೆ; ಮರುಳು ಸಾಗಿಸುತ್ತಿದ್ದ ಲಾರಿ ವಶ

ಶೃಂಗೇರಿ : ರಾಜ್ಯದಲ್ಲಿ ಮರಳು ದಂಧೆಕೋರರ ಹಾವಳಿ ಹೆಚ್ಚಿದ್ದು, ನದಿ ತೀರದ ಹಲವು ಕಡೆ ಅಕ್ರಮ ಮರಳು ಸಂಗ್ರಹ ಮಾಡುವ ಕೆಲಸ ಭರ್ಜರಿಯಾಗಿ ನಡೆಯುತ್ತಿದ್ದು, ಹಗಲು – ರಾತ್ರಿ ಎನ್ನದೇ ನದಿಯಲ್ಲಿರುವ ಮರಳನ್ನು ಲೂಟಿ ಮಾಡುತ್ತಿದ್ದಾರೆ.
ಇದೀಗ ಶೃಂಗೇರಿ ತಾಲೂಕಿನ ಹೊಸಕೊಪ್ಪ ಸಮೀಪದ ಕುಂಬ್ರಗೋಡು ಗ್ರಾಮದ ಹೊಳೆಗದ್ದೆಯ ಮಾಲತಿ ಹೂಳೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಸೀಜ್ ಮಾಡಿದ್ದಾರೆ. ಶೃಂಗೇರಿ PSI ಅಭಿಷೇಕ್ ನೇತೃತ್ವದಲ್ಲಿ ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ದಾಳಿ ನಡೆಸಿ ಆದರ್ಶ ಎನ್ನುವವರಿಗೆ ಸೇರಿದ ಲಾರಿಯನ್ನು ಸೀಜ್ ಮಾಡಿದ್ದಾರೆ. ಈ ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.



