ಕರಾವಳಿ

ಮನೆಗೆ ಹೋಗುವುದಿಲ್ಲ ಎಂದಿದ್ದಾನೆ ದಿಗಂತ್…!!ಕಾರಣ..?

ಬಂಟ್ವಾಳ: ನಿಗೂಢವಾಗಿ‌ ನಾಪತ್ತೆಯಾಗಿದ್ದ ಫರಂಗಿಪೇಟೆ ಕಿದೆಬೆಟ್ಟು ‌ನಿವಾಸಿ ದಿಗಂತ್ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.

ನಾಪತ್ತೆ ಪ್ರಕರಣವಾದ ಕೂಡಲೇ ಒಂದಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಪತ್ತೆಯಾದರೂ ಕೂಡ ಪ್ರಕರಣ ಸುಖಾಂತ್ಯ ಕಂಡಿಲ್ಲ, ದಿನಕ್ಕೊಂದು ವಿವಾದಗಳು ಹುಟ್ಟಿಕೊಂಡಿದ್ಧು, ಅಂತಿಮವಾಗಿ ಎಲ್ಲಿ ಯೂ ಟರ್ನ್ ಹೊಡೆಯುವುದು ಎಂಬುದು ನಿಗೂಢವಾಗಿ ಉಳಿದಿದೆ.

ಮನೆಗೆ ಹೋಗುವುದಿಲ್ಲ ಎಂದಿದ್ದಾನೆ ದಿಗಂತ್
ದಿಗಂತ್ ಪತ್ತೆಯಾದ ಕೂಡಲೇ ಪೋಲೀಸರ ಆತನನ್ನು ವಶಕ್ಕೆ ಪಡೆದುಕೊಂಡು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತ್ರತ್ವದಲ್ಲಿ ಮಂಗಳೂರಿಗೆ ಕರೆತರಲಾಗುತ್ತದೆ.
ಈ ಸಂದರ್ಭದಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಿದ ಪೋಲೀಸರಿಗೆ ಆತ ಯಾವ ಕಾರಣಕ್ಕೆ ಮನೆ ಬಿಟ್ಟು ತೆರಳಿರುವುದು ಎಂಬುದರ ಬಗ್ಗೆ ವಿಚಾರವನ್ನು ತಿಳಿಸಿರುತ್ತಾನೆ.
ಮತ್ತು ಮಹತ್ವದ ಹೇಳಿಕೆಯನ್ನು ಕೂಡ ಹೇಳಿರುತ್ತಾನೆ. ನಾನು ವಾಪಸು ಮನೆಗೆ ಹೋಗುವುದು ಇಲ್ಲ ಎಂಬ ಮಾತನ್ನು ಪೋಲೀಸರಲ್ಲಿ ಹೇಳಿಕೊಂಡಿದ್ದಾನೆ. ಆದರೆ ಯಾವ ಕಾರಣಕ್ಕಾಗಿ ವಾಪಸು ಮನೆಗೆ ಹೋಗುವುದಿಲ್ಲ ಎಂಬುದನ್ನು ಪೋಲೀಸರು ಸ್ಪಷ್ಟಪಡಿಸಿಲ್ಲ. ಇದೇ ಮಾತನ್ನು ಆತನ ಪೋಷಕರ ಬಳಿಯೂ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಈತನ ಈ ಹೇಳಿಕೆ ಒಂದಷ್ಟು ಗೊಂದಲಕ್ಕೆ ಕಾರಣವಾಗಿದೆ.
ಸತತವಾಗಿ 12 ದಿನಗಳ ಕಾಲ ಊರೂರು ಸುತ್ತಿದ ದಿಗಂತ್ ಉಡುಪಿಯಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಮನೆಗೆ ತೆರಳುವುದಿಲ್ಲ ಎಂಬ ಮಾತಿನ ಮರ್ಮವೇನು? ಎಂಬುದು ನಿಗೂಢವಾಗಿ ಉಳಿದಿದೆ.
*ಮನೆ ಬಿಟ್ಟು ತೆರಳುವುದು ಪ್ರೀಪ್ಲಾನ್ಡ್ ಆಗಿರಬಹುದಾ ?
ದಿಗಂತ್ ಮನೆಯಿಂದ ಹೊರಟು ಹೋಗುವಾಗ ಆತನ ಜೊತೆ ಬಟ್ಟೆಯನ್ನು ಹಾಗೂ ಶೂಗಳನ್ನು ಆತ ತೆಗೆದುಕೊಂಡು ಹೋಗಿದ್ದ ಎಂಬ ಮಹತ್ವದ ವಿಚಾರವನ್ನು ಪೋಲೀಸರು ತಿಳಿಸಿದ್ದು, ಆತನ ಬಳಿಯಲ್ಲಿ ಇದ್ದ ಬಟ್ಟೆ ಹಾಗೂ ಶೂ ಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೋಲೀಸ್ ತನಿಖೆಯ ವೇಳೆ ಮನೆಯವರ ಅಸಹಕಾರ ? …
ದಿಗಂತ್ ನಾಪತ್ತೆಯಾದ ಬಳಿಕ ಈತನ ಪತ್ತೆಗಾಗಿ ಪೋಲೀಸ್ ತಂಡ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಆರಂಭಿಸಿತು. ಆದರೆ ಯಾವುದೇ ಸುಳಿವು ಇವರಿಗೆ ಸಿಕ್ಕಿಲ್ಲ. ಈತನ ಪತ್ತೆಯ ಸಹಕಾರದ ದೃಷ್ಟಿಯಿಂದ ಪೋಲೀಸರ ತಂಡ ಪೋಷಕರನ್ನು ತನಿಖೆ ನಡೆಸುವ ವೇಳೆ ಸರಿಯಾದ ಸಹಕಾರ ನೀಡುತ್ತಿರಲಲ್ಲಹಾಗಾಗಿಯೇ ಪ್ರಕರಣ ಜಟಿಲವಾಗಿ, ಯಾವುದೇ ಸ್ಪಷ್ಟವಾದ ಸುಳಿವು ಸಿಗಲು ಸಾಧ್ಯವಾಗಿರಿಲಿಲ್ಲ.
‌ಈತ ಮನೆಯಿಂದ ಹೊರಟ ಸಮಯವನ್ನು ಕೂಡ ಸರಿಯಾದ ರೀತಿಯಲ್ಲಿ ಪೋಲೀಸರ ಬಳಿ ತಿಳಿಸಿಲ್ಲ ಎಂದು ಹೇಳಲಾಗಿದೆ. ದಿಗಂತ್ ಮೂರು ಮೊಬೈಲ್ ಗಳ್ನು ಬಳಕೆ ಮಾಡುತ್ತಿರುವುದು ತನಿಖೆಯ ವೇಳೆ ತಿಳಿದಿದ್ದು, ಆರಂಭದಲ್ಲಿ ಮನೆಯವರು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು,ಬಳಿಕ ಈತ ಬಳಕೆ ಮಾಡುತ್ತಿದ್ದ ಮೊಬೈಲ್ ಬಗ್ಗೆ ಒಪ್ಪಿಕೊಂಡಿದ್ದರು. ಇದೀಗ ಆತ ಮನೆಯಿಂದ ಹೋಗುವಾಗ ಬಟ್ಟೆ ಹಾಗೂ ಶೂ ತೆಗೆದುಕೊಂಡು ಹೋಗಿರುವ ವಿಚಾರ ಪೋಲೀಸರಿಗೆ ತನಿಖೆಯ ವೇಳೆ ಗೊತ್ತಾಗಿದ್ದು, ಈ ವಿಚಾರವನ್ನು ಕೂಡ ಮನೆಯವರು ಮುಚ್ಚಿಟ್ಟಿದ್ದರು ಎಂದು ‌ಪೋಲೀಸ್ ಮೂಲಗಳು ತಿಳಿಸಿವೆ.
ನಾಪತ್ತೆಯಾದ ಆದ ಸಂದರ್ಭದಲ್ಲಿ ಆತ ಬಿಳಿ ಟೀ ಶರ್ಟ್ ಹಾಕಿಕೊಂಡು ತೆರಳಿದ್ದ ಬಗ್ಗೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಬಿಳಿ ಟೀ ಶರ್ಟ್ ಹಾಕಿಕೊಂಡು ಹೋಗಿಲ್ಲ ಎಂಬುದರ ಬಗ್ಗೆ ಪೋಲೀಸರ ತನಿಖೆಯ ವೇಳೆ ಕಂಡು ಬಂದ ಸತ್ಯ ವಿಚಾರವಾಗಿದ್ದು, ಈತನ ಬಳಿ ಜಾತಿ ಸಂಘಟನೆಗೆ ಸೇರಿದ ಟೀ ಶರ್ಟ್ ಸಹಿತ ಬೇರೆ ಶರ್ಟ್ ಹಾಗೂ ಟೀ ಶರ್ಟ್ ಹಾಗೂ ತಲೆಗೆ ಹಾಕುವ ಟೋಪಿ ಗಳನ್ನು ಆತ ಕೊಂಡು ಹೋಗಿದ್ದ ಎಂದು ಪೋಲೀಸರು ತಿಳಿಸಿದ್ದಾರೆ. ಅಲ್ಲದೆ ಡೀ ಮಾರ್ಟ್ ನಲ್ಲಿ ಚಾಕು ಒಂದನ್ನು ಪಡೆದುಕೊಂಡಿರುವ ಬಗ್ಗೆ ಪೋಲೀಸರು ತಿಳಿಸಿದ್ದಾರೆ.
ಮನೆಯವರಲ್ಲಿ ಪೋಲೀಸರು ಆತನ ಬಟ್ಟೆಬರೆಗಳ ಬಗ್ಗೆ ಕೇಳಿದಾಗ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.
ಅಂತಿಮವಾಗಿ ದಿಗಂತ್ ಸುರಕ್ಷಿತವಾಗಿ ಪೋಲೀಸರ ಕೈಗೆ ಸಿಕ್ಕಿದರೂ ಕೂಡ ಇದೀಗ ಪ್ರಕರಣದ ತನಿಖೆಯ ಹಾದಿಯಲ್ಲಿ ಒಂದಷ್ಟು ಗೊಂದಲಗಳಿಗೆ ಕಾರಣವಾಗಹುದಾ? ಎಂಬುದನ್ನು ಕಾದುನೋಡಬೇಕಾಗಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…

12 hours ago

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…

12 hours ago

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…

12 hours ago

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…

12 hours ago

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…

12 hours ago

ಮಂಗಳೂರು: ರಾಜಾಜಿ ಉದ್ಯಾನವನದಲ್ಲಿ ಗಾಂಧಿ ಜಯಂತಿ ಆಚರಣೆ

ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…

12 hours ago