ಕೇಪ್ ಕೆನವೆರಲ್ (ಅಮೇರಿಕಾ) : ನಾಸಾ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಕ್ ವಿಲ್ಮೊರ್ ಮಾರ್ಚ್ ೮ ರಂದು ಸಂಜೆ 5. 57 ಕ್ಕೆ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಅಧಿಕೃತವಾಗಿ ಘೋಷಿಸಿದೆ.

ಈ ಬಗ್ಗೆ ತನ್ನ ಅಧಿಕೃತ X ಖಾತೆಯಲ್ಲಿ ಹಂಚಿಕೊಂಡಿರುವ ನಾಸಾ, ‘ನಮ್ಮ ಗಗನಯಾನಿಗಳನ್ನು ಯಶಸ್ವಿಯಾಗಿ ಕರೆತರುವ ಕೆಲಸವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರಂಭವಾಗಿದೆ’ ಎಂದು ತಿಳಿಸಿದೆ.
ಸುನಿತಾ ಮತ್ತು ವಿಲ್ಮೊರ್ ಅಲ್ಲದೆ ಐ ಎಸ್ ಎಸ್ ನಲ್ಲಿರುವ ನಿಕ್ ಹೇಗ್ ಮತ್ತು ಅಲೆಗ್ಸಾಂಡರ್ ಗೊರ್ಬನೊವ್ ಅವರೂ ಭೂಮಿಗೆ ಮರಳಿದ್ದಾರೆ. ಗಗನನೌಕೆಯು ಫ್ಲೋರಿಡಾ ತೀರಕ್ಕೆ ಬಂದಿಳಿಯಲಿದೆ.



