ಸೋಮವಾರ ಸಂಜೆ ನಾಗಪುರದಲ್ಲಿ ನಡೆದ ಕೋಮು ಗಲಭೆಗೆಯ ಪ್ರಮುಖ ಸೂತ್ರಧಾರಿ ಎನ್ನಲಾದ ಸ್ಥಳೀಯ ರಾಜಕೀಯ ಮುಖಂಡ ಫಾಹಿಮ್ ಖಾನ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ ನಾಗ್ಪುರ ಘಟಕದ ಜಿಲ್ಲಾ ಅಧ್ಯಕ್ಷರಾದ ಫಾಹಿಂ ಖಾನ್ ಅವರ ಹೆಸರು ಗಣೇಶಪೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ನಲ್ಲಿ ಅಧಿಕೃತವಾಗಿ ಸೇರಿಸಿದ ಕೆಲವೇ ತಾಸುಗಳಲ್ಲಿ ಅವರ ಬಂಧನವಾಗಿದೆ.
ಸಧ್ಯ ನಾಗ್ಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿಸಲಾಗಿದ್ದು, 51 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ರವೀಂದ್ರ ಸಿಂಘಲ್ ತಿಳಿಸಿದರು.



