ಜನ ಮನದ ನಾಡಿ ಮಿಡಿತ

Advertisement

ಆಂಬುಲೆನ್ಸ್ ಗಳ ದುರಸ್ಥಿಗೆ ಸತ್ಯ ಫೌಂಡೇಶನ್ ವತಿಯಿಂದ ಉಪವಿಭಾಗಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

ಹುಣಸೂರು ತಾಲೂಕಿನಲ್ಲಿ 3-4 ತಿಂಗಳುಗಳಿಂದ ಆರೋಗ್ಯ ಕವಚ (108) ವಾಹನಗಳ ದುರಸ್ತಿಯನ್ನು ಮಾಡಿಸದೆ ಸಾರ್ವಜನಿಕರಿಗೆ ಬಳಕೆಯಾಗದೆ ತೀವ್ರ ತೊಂದರೆಪಡುತ್ತಿದ್ದು ಮಾ. 21 ರ ಶುಕ್ರವಾರ ಉಪವಿಭಾಗಾಧಿಕಾರಿಗಳಾದ ವಿಜಯ್‌ ಕುಮಾರ್‌ ರವರ ಮುಖಾಂತರ ಸರ್ಕಾರಕ್ಕೆ ಸತ್ಯ ಎಂ.ಎಸ್.‌ ಫೌಂಡೇಶನ್‌ ಅಧ್ಯಕ್ಷ ಸತ್ಯಪ್ಪ, ಅಂಬುಲೆನ್ಸ್‌ ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಮನವಿ ಪತ್ರ ಸಲ್ಲಿಸಿದರು.

 

ಈ ಸಂದರ್ಭದಲ್ಲಿ ಸತ್ಯಪ್ಪ ರವರು ಮಾತನಾಡಿ ಹುಣಸೂರು ತಾಲೂಕಿನಲ್ಲಿ ಸರ್ಕಾರದಿಂದ ಮಂಜೂರಾದ ಆಂಬುಲೆನ್ಸ್ ವಾಹನಗಳು ಸಣ್ಣ ಪುಟ್ಟ ದುರಸ್ತಿಯಿಂದ ಕೂಡಿದ್ದು ದುರಸ್ಥಿ ಮಾಡಿಸದೆ ನಿಲುಗಡೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದ್ದು ಇತರೆ ತಾಲೂಕಿನ 108 ಆಂಬುಲೆನ್ಸ್ ವಾಹನ ಓಡಾಡುತ್ತಿದ್ದು ಆದರೆ ನಮ್ಮ ತಾಲೂಕಿನಲ್ಲಿ ಆಂಬುಲೆನ್ಸ್ ಸೌಲಭ್ಯ ದೊರಕದ ಸಾರ್ವಜನಿಕರು ಪರದಾಡುವಂತಾಗಿದೆ. ಕಾಡಂಚಿನ ಗ್ರಾಮಗಳಾದ ಗಿರಿಜನರು ಅತಿ ಹೆಚ್ಚು ವಾಸ ಮಾಡುವಂತಹ ಹನಗೋಡು ಸಾರ್ವಜನಿಕ ಆಸ್ಪತ್ರೆ ಇಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ತೀವ್ರ ನರಕಯಾತನೆ ಪಡುವಂತಾಗಿದೆ.

ಹುಣಸೂರು ಸಾರ್ವಜನಿಕ ಆಸ್ಪತ್ರೆ 2 ತಿಂಗಳು, ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ 14 ತಿಂಗಳು, ಬಿಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ 2 ತಿಂಗಳು, ರತ್ನಪುರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2 ತಿಂಗಳು 108 ಆಂಬುಲೆನ್ಸ್ ಗಳ ಸಣ್ಣಪುಟ್ಟ ದುರಸ್ಥಿಯನ್ನು ಮಾಡಿಸದೆ ನಿಲುಗಡೆಯಾಗಿರುತ್ತದೆ.

108 ಆಂಬುಲೆನ್ಸ್ ಗಳ ಪ್ರಾರಂಭವಾಗಿದ್ದು 2008 ರಲ್ಲಿ ಯಡ್ಯೂರಪ್ಪ ರವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರೋಗ್ಯ ಸಚಿವರಾಗಿ ಶ್ರೀರಾಮುಲುರವರ ಕಾಲದಲ್ಲಿ ಅಲ್ಲಿಂದ ಇಲ್ಲಿಯವರೆಗೂ 108 ಅಂಬುಲೆನ್ಸ್‌ ವಾಹನಗಳ ಸೇವೆ ಬಹಳ ಅತ್ಯುತ್ತಮವಾಗಿ ನಡೆಯುತ್ತಾ ಬರುತ್ತಿತ್ತು. ಜಿವಿಕೆ ಎನ್ನುವ ಹೆಸರಿನಡಿಯಲ್ಲಿ ಗ್ರೀನ್‌ ಹೆಲ್ತ್‌ ಸರ್ವಿಸಸ್‌ ಸಂಸ್ಥೆಯಿಂದ ನಿರ್ವಹಣೆ ಜವಾಬ್ದಾರಿ ಹೊತ್ತು ರಾಜ್ಯದಲ್ಲಿ 108 ಸೇವೆ ದೊರೆಯುವಂತಾಗಿದ್ದು, ರಾಜ್ಯಕ್ಕೆ ಪ್ರಥಮವಾಗಿ 517 ಆರೋಗ್ಯ ಕವಚ 108 ವಾಹನ ನೀಡಲಾಗಿತ್ತು. ಈಗ 800 ಕ್ಕಿಂತ ಹೆಚ್ಚು ವಾಹನಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಆದರೆ ಕಳೆದ ಎರಡು ತಿಂಗಳುಗಳಿಂದ 108 ಸೇವೆ ಕುಂಠಿತಗೊಂಡಿದ್ದು, ಸಂಬಂಧಿಸಿದವರನ್ನು ಕೇಳಿದರೆ ಸಿಬ್ಬಂಧಿ ಕೊರತೆ, ವಾಹನ ಸರಿಯಿಲ್ಲ, ದುರಸ್ಥಿಯಿಂದ ಕೂಡಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಮೊದಲು 108 ವಾಹನದಲ್ಲಿ ಕರ್ತವ್ಯ ನಿರ್ವಹಿಸುವವರು 12 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಲ್ಕು ದಿನ ಕರ್ತವ್ಯ ನಿರ್ವಿಸಿ ಒಂದು ದಿನ ರಜೆ ಮಾಡುತ್ತಿದ್ದರು, ಆಗ ಎರಡು ನರ್ಸ್‌, ಎರಡು ಚಾಲಕರು ಇದ್ದರೆ ವಾಹನಗಳನ್ನು ನಿರ್ವಹಿಸುವುದು ಸುಲಭವಾಗಿತ್ತು. ಆದರೆ ಈಗ ಸರ್ಕಾರದ ನಿಯಮದ ಪ್ರಕಾರ ಎಂಟು ತಾಸು ಕರ್ತವ್ಯ ಎನ್ನುವುದು ಮೂರು ಚಾಲಕರು, ಮೂರು ನರ್ಸ್‌ಗಳ ಅಗತ್ಯತೆ ಇದೆ. ಇವರ ನೇಮಕಾತಿಯನ್ನು ಸರ್ಕಾರ ಮಾಡದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಇದರೊಂದಿಗೆ 3500 ಅಂಬುಲೆನ್ಸ್‌ ಸಿಬ್ಬಂಧಿಗಳಿಗೆ ವೇತನ ಹೆಚ್ಚಳ ಮಾಡಿ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು.

108 ಆಂಬುಲೆನ್ಸ್ ಗಳ ನಿರ್ವಹಣೆ ಹಾಗೂ ವೇತನವನ್ನು ಕೇಂದ್ರ ಸರ್ಕಾರದಿಂದ 40% ಹಾಗೂ ರಾಜ್ಯ ಸರ್ಕಾರದಿಂದ 60% ಎಂದು ಹಣ ಹೊಂದಿಸಿ ಕೊಡುವ ಯೋಜನೆಯಾಗಿದೆ. ತೆಲಂಗಾಣ ಮೂಲದ ಜಿವಿಕೆ ಗ್ರೀನ್ ಹೆಲ್ತ್ ಸಂಸ್ಥೆ ಎಂ.ಆರ್‌ ಐ ಯವರು ರಾಜ್ಯಾದ್ಯಂತ ಈ 108 ಆಂಬುಲೆನ್ಸ್ ಗಳ ಗುತ್ತಿಗೆಯನ್ನು ಪಡೆದಿದ್ದು, ಸರ್ಕಾರದಿಂದ ಬಂದಂತಹ ಟೆಂಡರ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಈ 108 ಆಂಬುಲೆನ್ಸ್ಗಳ ಸೇವೆ ಸ್ಥಗಿತಗೊಂಡಿರುವುದು ತುಂಬಾ ವಿಷಾದನೀಯ ಸಂಗತಿಯಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು 108 ಆಂಬುಲೆನ್ಸ್ ಗಳನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು. ಇನ್ನು ಹದಿನೈದು ದಿನಗಳ ಒಳಗಾಗಿ 108 ಆಂಬುಲೆನ್ಸ್ ದುರಸ್ಥಿಪಡಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕ ಆಸ್ಪತ್ರೆ ಎದುರು ಫೌಂಡೇಶನ್, 108 ಅಂಬುಲೆನ್ಸ್‌ ಸಿಬ್ಬಂಧಿಗಳು ಹಾಗೂ ಸಾರ್ವಜನಿಕರೊಂದಿಗೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಸತ್ಯಪ್ಪರವರು ಮಾಧ್ಯಮದ ಮುಖಾಂತರ ತಿಳಿಸಿರುತ್ತಾರೆ.

ಉಪವಿಭಾಗಾಧಿಕಾರಿಗಳಾದ ಶ್ರೀ ವಿಜಯ್‌ ಕುಮಾರ್‌ ರವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ ಶೀಘ್ರವಾಗಿ ತಮ್ಮ ಮನವಿಯಲ್ಲಿ ತಲುಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ತಾಲ್ಲೂಕು ಮಡಿವಾಳ ಸಮಾಜದ ತಾಲ್ಲೂಕು ಕಾರ್ಯದರ್ಶಿಗಳಾದ ನಾಗಪ್ಪ ಮಾಸ್ತರ್‌, ಅಂಬುಲೆನ್ಸ್‌ ಸಿಬ್ಬಂಧಿಗಳಾದ ಮಂಜುನಾಥ್‌, ಮಾದೇವ, ಮನುಕುಮಾರ್‌, ಪುಟ್ಟನಾಯಕ, ದೀಪು, ಲೋಕೇಶ್‌, ಉಮೇಶ್‌, ಪ್ರಕಾಶ್‌, ನವೀನ್‌, ವೀಣಾ, ಅಂಬಿಕಾ, ಜ್ಞಾನೇಶ್ವರಿ, ಲೋಕೇಶ್‌, ಪ್ರಸಾದ್‌, ಶಾದಿಯಾ ಬಾನು, ರಾಜೇಶ್‌, ನಟೇಶ್‌ ಶಶಿಕುಮಾರ್‌ ಮೋಹನ್‌ ಮುಂತಾದವರಿದ್ದರು .

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!