ಮಂಗಳೂರು: ಶತ್ರು ಸಂಹಾರ ಪೂಜೆಗೆ ಹೆಸರಾಗಿರುವ ಕೇರಳ ಕಣ್ಣೂರಿನ ಪ್ರಸಿದ್ಧ ಕ್ಷೇತ್ರ ಮಾಡಾಯಿಕಾವು ಶ್ರೀಭಗವತಿ ದೇವಸ್ಥಾನಕ್ಕೆ ಶನಿವಾರ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀತ್ ಸಮೇತ ಭೇಟಿ ನೀಡಿ ಶತ್ರುಸಂಹಾರ ಯಾಗ ನಡೆಸಿದರು.
ಶನಿವಾರ ಬೆಳಗ್ಗೆ ಸಂಗಡಿಗರ ಜೊತೆ ಎರಡು ಕಾರಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ದರ್ಶನ್ ಅವರು ಸಂಕಲ್ಪ ಕೈಗೊಂಡು ಶತ್ರು ಸಂಹಾರ ಯಾಗದಲ್ಲಿ ಪಾಲ್ಗೊಂಡರು.
ಸಾಂಪ್ರದಾಯಿಕ ದಿರಿಸಿನಲ್ಲಿ ದೇವಸ್ಥಾನ ಪ್ರವೇಶಿಸಿದ ದರ್ಶನ್, ಕುಟುಂಬ ಮಧ್ಯಾಹ್ನ ವರೆಗೆ ಶತ್ರು ಸಂಹಾರ ಪೂಜೆ(ಯಾಗ) ನೆರವೇರಿಸಿತು. ಮಹಾಪೂಜೆ ವೇಳೆ ಸಂಕಲ್ಪ ಮಾಡಿ ನಂತರ
ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಅರ್ಚಕರು ದರ್ಶನ್, ಕುಟುಂಬಕ್ಕೆ ಕಪ್ಪು ಬಣ್ಣದ ತಾಯತ ನೀಡಿದ್ದು, ಅದನ್ನು ಧರಿಸಿದರೆ ಸ್ವರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೆ ದೃಷ್ಟಿ ನಿವಾರಣೆಗೆ ಅಘ ಹೆಸರಿನ ಪೂಜೆಯನ್ನೂ ದರ್ಶನ್ ನೆರವೇರಿಸಿದರು.
ಮಹಾಪೂಜೆ ವೇಳೆ ದರ್ಶನ್ ಮನಸ್ಸಿನಲ್ಲೇ ದೀರ್ಘ ಹೊತ್ತು ಪ್ರಾರ್ಥನೆ ಸಲ್ಲಿಸಿದರು. ಏನಾದರೂ ಸಮಸ್ಯೆಯಾಗಿದ್ದರೆ, ಅದನ್ನು ಮನಸ್ಸಿನಲ್ಲೇ ಹೇಳಿ ಪ್ರಾರ್ಥಿಸುವುದು ಇಲ್ಲಿನ ಕ್ರಮ. ಮಾಟ, ಮಂತ್ರ, ಶತ್ರುಬಾಧೆ ನಿವಾರಣೆಗೆ ಈ ಕ್ಷೇತ್ರ ಪ್ರಾಮುಖ್ಯತೆ ಹೊಂದಿದೆ. ಯಾರ ವಿರುದ್ಧ ಅಥವಾ ಯಾರದೇ ವೈಯಕ್ತಿಕ ಹೆಸರೆತ್ತಿ ಇಲ್ಲಿ ಶತ್ರು ಸಂಹಾರ ಯಾಗ
ನಡೆಸುವುದಿಲ್ಲ. ಕೇವಲ ಮಾಟ, ಮಂತ್ರ, ಶತ್ರುಬಾಧೆ ನಿವಾರಣೆಗೆ ಮಾತ್ರ ಇಲ್ಲಿ ಯಾಗ ನಡೆಸಲಾಗುತ್ತದೆ. ಈ ದೇವಸ್ಧಾನಕ್ಕೆ ದರ್ಶನ್ ಆಗಮಿಸಿ ಸೇವೆ ಸಲ್ಲಿಸಿರುವ ಹಿಂದೆ ಅವರಿಗೆ ಮಾಟ, ಮಂತ್ರ, ಶತ್ರುಬಾಧೆಯ ಸಾಧ್ಯತೆಯನ್ನು ಹೇಳಲಾಗುತ್ತಿದೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…