ಮಂಜೇಶ್ವರ; ಪೊಲೀಸ್ ಸ್ಟೇಷನ್‌ನ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳ ಮನವಿ ಮೇರೆಗೆ ಮಂಜೇಶ್ವರ ಪೊಲೀಸ್ ಸ್ಟೇಷನ್‌ಗೆ 2 ಲ್ಯಾಪ್ ಟಾಪ್ ಹಾಗೂ 2ಪ್ರಿಂಟರ್ ಮತ್ತು ಸ್ಕಾö್ಯನರ್‌ರನ್ನ ಕೊಡುಗೈದಾನಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭ ಕೊಡುಗೆಯಾಗಿ ನೀಡಿದ್ರು.

ಈ ವೇಳೆ ಸದಾಶಿವ ಶೆಟ್ಟಿಯವರ ಸಾಮಾಜಿಕ ಕಾರ್ಯ ಹಾಗೂ ಸೇವೆಯನ್ನು ಸ್ಮರಿಸಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳ ಪರವಾಗಿ ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಸದಾಶಿವ ಶೆಟ್ಟಿಯವರನ್ನು ಹಾಗೂ ಸಹೋದರ ಚಂದ್ರಹಾಸ ಶೆಟ್ಟಿಯವರನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ಅನೂಪ್ ಕುಮಾರ್ ಇ ವಹಿಸಿದ್ರು. ಇನ್ನು ಈ ಸಂದರ್ಭದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಜೇಶ್ ಕುಮಾರ್, ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಪದಾಧಿಗಳಾದ ಕೆ.ನಾರಾಯಣ ನಾಯ್ಕ್ ನಡುಹಿತ್ತಿಲು, ಕೂಳೂರು, ಕಾರ್ತಿಕ್ ಶೆಟ್ಟಿ ಮಜಿಬೈಲು, ಚಂದ್ರಹಾಸ ಮೀಯಪದವು, ಜಯರಾಜ್ ಶೆಟ್ಟಿ ಚಾಲ್, ಜಯರಾಜ್ ಜಿ.ಶೆಟ್ಟಿ ಕೂಳೂರು, ಸುಬ್ಬಣ್ಣ ಆಳ್ವ ಮೀಯಪದವು, ವಿಜಯ ಕುಮಾರ್ ರೈ, ಚಂದ್ರಕಾAತ ಶೆಟ್ಟಿ ಇಚ್ಚಲಂಗೊAಡು, ಜಯರಾಮ ಶೆಟ್ಟಿ ಕುಳೂರು, ಶಿವಾನಂದ ಶೆಟ್ಟಿ ಕೋಡಿಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ರು.

ಮಂಜೇಶ್ವರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಉಮೇಶ್ ಕೆ ಸ್ವಾಗತಿಸಿ, ಮಂಜೇಶ್ವರ ಪೊಲೀಸ್ ಠಾಣೆಯ ರೈಟರ್ ಸಿಯಾದ್ ವಂದಿಸಿದ್ರು.



