ದಶಕಗಳೇ ಕಳೆದಿದೆ. ವರುಷಗಳೇ ಸಂದಿದೆ. ಕಾದ ಇಳೆಗೆ ಮಳೆ ತಂಪೆರೆದAತೆ ಕಾಯುವ ಭಕ್ತ ಮನಕ್ಕೆ ಭಕ್ತಿಯ ಸಾಕ್ಷಾತ್ಕಾರ ಮಾಡುವ ಸುಸಮಯ ಇಂದಿನಿAದ ಮಧೂರು ಕ್ಷೇತ್ರದಲ್ಲಿ ಎದುರಾಗಿದೆ.

ಭಕ್ತ ಮನಸ್ಸುಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದ್ದು, ಬರೋಬ್ಬರಿ ಒಂದೂವರೆ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡ ಮಧೂರು ಕ್ಷೇತ್ರದ ಸ್ವಾಗತ ಗೋಪುರ ಲೋಕಾರ್ಪಣೆಗೊಂಡಿದೆ. ಅದೇಷ್ಟೋ ದೈವ ದೇವಸ್ಥಾನಗಳ ಅಭಿವೃದ್ಧಿಯ ರೂವಾರಿಯಾಗಿರುವ ಕನ್ಯಾನ ಸದಾಶಿವ ಶೆಟ್ಟಿಯವರು ಕೊಡುಗೆಯಾಗಿ ದೇಗುಲಕ್ಕೆ ನೀಡಿರುವ ಮಹಾದ್ವಾರವನ್ನು ಬಹುಭಾಷಾ ಖ್ಯಾತ ನಟ ಸುಮನ್ ತಲ್ವಾರ್ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದ್ರು. ಆ ಮೂಲಕಸಪ್ತ ಭಾಷಾ ಸಂಗಮ ಭೂಮಿ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಯಿತು. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಖ್ಯಾತ ನಟ ಸುಮನ್ ತಲ್ವಾರ್ ಅವರು ತನ್ನ ಮಾತೃಭಾಷೆಯಲ್ಲೇ ದೇವರ ಭಕ್ತಿಯನ್ನ ವರ್ಣಿಸಿದ್ರು.

ಇದೇ ವೇಳೆ ಕೊಡುಗೈದಾನಿ, ಮಹಾದಾನಿ, ಕಲಿಯುಗದ ಕರ್ಣೆ ಬಿರುದಾಂಕಿತ, ಮಧೂರು ಸ್ವಾಗತ ಗೋಪುರದ ನಿರ್ಮಾತ್ರೃ ಕನ್ಯಾನ ಸದಾಶಿವ ಶೆಟ್ಟಿಯವರು ತನ್ನ ಮನದಾಳದ ಮಾತುಗಳನ್ನಾಡಿದ್ರು.

ಇನ್ನು ಈ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ,ಗೌರವ ಉಪಾಧ್ಯಕ್ಷರು ಹಾಗೂಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಆಡಳಿತ ಮೊಕ್ತೇಸರರಾದ ಕೆ.ಕೆ ಶೆಟ್ಟಿ ಕುತ್ತಿಕ್ಕಾರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಶ್ರೀ ಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ. ಮಹಾಬಲೇಶ್ವರ ಭಟ್ ಎಡಕ್ಕಾನ, ಬ್ರಹ್ಮಕಲಶೋತ್ಸವ ಸಮಿತಿ ಮಧೂರು ಕ್ಷೇತ್ರದ ಅಧ್ಯಕ್ಷರಾದ ಡಾ.ಬಿ.ಎಸ್.ರಾವ್, ಬಂಟ ಸಮಾಜದ ಧೀಮಂತ ನಾಯಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ನಾಡೋಜ ಡಾ. ಜಿ ಶಂಕರ್ ಉಡುಪಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ರಘುರಾಮ್ ಶೆಟ್ಟಿ ಕನ್ಯಾನ, ಬಿ.ಕೆ ಮಧೂರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಇದರ ಸ್ಥಾಪಕಾಧ್ಯಕ್ಷರಾದ ಸತೀಶ್ ಶೆಟ್ಟಿ ಪಟ್ಲ, ಕೆ.ನಾರಾಯಣ ನಾಯ್ಕ್ ನಡುಹಿತ್ತಿಲು ಕುಳೂರು ಸೇರಿದಂತೆ ಹಲವರು ಉಪಸ್ಥಿತರಿದ್ರು.



