ಜೇಸಿಐ ಪಂಜ ಪಂಚಶ್ರೀ ಪಂಜದ ಲಯನ್ಸ್ ಭವನದಲ್ಲಿ ಆಯೋಜಿಸಿದ ಲ್ಯೂಟ್‌ದ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ಕಳೆದ 22ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಕೋಮಲಾಂಗಿ ಯನ್ ಅವರನ್ನು ಗೌರವಿಸಲಾಯಿತು.

ಸ್ವಚ್ಛ ಭಾರತ ಎನ್ನು ರಾಷ್ಟಿçÃಯ ಚಿಂತನೆಯನ್ನು ತಮ್ಮ ಬದುಕಿನುದ್ದಕ್ಕೂ ಆಳವಡಿಸಿಕೊಂಡ ಕರ್ಮಜೀವಿಯಿದ್ದರೇ ಅವರೇ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿರುವ ಸ್ವಚ್ಛತಾ ಸಿಬ್ಬಂದಿಗಳು. ಹೌದು ಇವರುಗಳ ಸಾಲಿಗೆ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಚ್ಛತಾ ಸಿಬ್ಬಂದಿ ಶ್ರೀಮತಿ ಕೋಮಲಾಂಗಿ ಯನ್ ಸೇರ್ಪಡೆಯಾಗುತ್ತಾರೆ.

ಇವರು ಬರೋಬ್ಬರಿ 22ವರ್ಷಗಳಿಂದ ಪಂಜ ಗ್ರಾಮ ಪಂಚಾಯತ್‌ನ ಸ್ವಚ್ಛತಾ ಅಭಿಯಾನಕ್ಕೆ ಜೀವ ಸವೆಸಿದವರು. ಬಡತನದಿಂದ ಬದುಕು ಕಟ್ಟಿಕೊಂಡರೂ ಶಿಕ್ಷಣದ ಮಹತ್ವವನ್ನು ಅರಿತು ತಮ್ಮ ಮಕ್ಕಳೀರ್ವರಿಗೂ ಉತ್ತಮ ಶಿಕ್ಷಣ ನೀಡಿ, ಸುಶಿಕ್ಷಿತರನ್ನಾಗಿಸಿದ ಮಹಾತಾಯಿ. ಮಹಿಳೆಯೋರ್ವಳು ದಿಟ್ಟತನದಿಂದ ಬದುಕನ್ನು ಎದುರಿಸಿ ಮದರಿಯೆನಿಸಿಕೊಳ್ಳಬೆಕೇನ್ನುವುದಕ್ಕೆ ಸ್ವತಃ ಸಾಕ್ಷಿ ಸ್ವರೂಪಿಯಾಗಿ ಸಮಾಜಕ್ಕೆ ಆದರ್ಶ ಪ್ರಾಯರೆನಿಸಿದವರು ಈಕೆ. ಇವರ ಈ ಮಹತ್ಕಾರ್ಯಕ್ಕೆ ಗೌರವಾರ್ಥವಾಗಿ ಜೇಸಿಐ ಪಂಜ ಪಂಚಶ್ರೀ ವತಿಯಿಂದ ಅಭಿನಂದನಾ ಪತ್ರ ಹಾಗೂ ಶಾಲುಹೊದಿಸಿ ಸನ್ಮಾಸಿ ಗೌರವಿಸಿದೆ.



