ಭದ್ರಾ ಅಭಯಾರಣ್ಯ ವ್ಯಾಪ್ತಿಯ ಹೆಜ್ಜೆಯ ವಲಯದಲ್ಲಿ ಸುಮಾರು 50 ವರ್ಷ ಪ್ರಾಯದ ಒಂಟಿ ದಂತ ಹೊಂದಿದ್ದ ಸಲಗ ಸಾವನ್ನಪ್ಪಿದೆ.

ಆನೆಯು ಕಳೆದ ಮೂರು ದಿನಗಳ ಹಿಂದೆಯೇ ಮೃತಪಟ್ಟಿದ್ದು ತೇಗೂರು ಗುಡ್ಡ ಬೇಟೆ ನಿಗ್ರಹ ಪಡೆಯ ಸಿಬ್ಬಂದಿ ಅರಣ್ಯ ಗಸ್ತು ತಿರುಗುವಾಗ ಆನೆಯ ಕಳೇಬರ ಪತ್ತೆಯಾಗಿದೆ. ಕಳೆದ ಎರಡು ವರ್ಷದಿಂದ ಆನೆಯ ಹಿಂಬದಿ ಎಡಗಾಲು ಡೊಂಕಾಗಿ ಕುಂಟುತ್ತ ಆರಣ್ಯದಲ್ಲಿ ಆಹಾರ ಅರಸುತ್ತಿತ್ತು ಎನ್ನಲಾಗಿದೆ. ಪ್ರಕಾಶ್ ನೇತೃತ್ವದ ಪಶು ವೈದ್ಯರ ತಂಡ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದೆ. ಅದರ ಹೊಟ್ಟೆಯಲ್ಲಿ ಯಾವುದೇ ಆಹಾರ ಕಂಡುಬಂದಿಲ್ಲ. ಹೀಗಾಗಿ ಆನೆ ಸಹಜವಾಗಿ ಸಾವನ್ನಪ್ಪಿದೆ ಎನ್ನಲಾಗಿದೆ. ಸರ್ಕಾರದ ಆದೇಶದ ಅನ್ವಯ ಆನೆಯ ದಂತವನ್ನು ತೆಗೆದು ಆನೆಯ ಕಳೇಬರ ಅಲ್ಲಿಯೇ ಬಿಡಲಾಗಿದೆ.



