ಪಡುಬಿದ್ರೆ: ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರು ಹಾಗೂ ಬೇಲ್ಮಣ್ಣಿ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಟಿಪ್ಪರಿನ ಡಂಪರಿಗೆ ಸಿಲುಕಿದ ಸ್ಯಾಂಟ್ರೋ ಕಾರನ್ನು ಕಿಲೋಮೀಟರ್ ದೂರ ಎಳೆದುಕೊಂಡು ಹೋಗಿರುವ ಘಟನೆ ಪಡೆಬಿದ್ರೆಯಲ್ಲಿ ನಡೆದಿದೆ. ಸಾರ್ವಜನಿಕರು ಎಳೆದಾಡಿ ಹೊಡೆಯಬಹುದು ಎಂಬ ಆತಂಕದಲ್ಲಿ ಅಪಘಾತ ನಡೆಯುತ್ತಿದ್ದಂತೆ ವಾಹನದ ವೇಗವನ್ನು ಟಿಪ್ಪರ್ ಚಾಲಕ ಹೆಚ್ಚಿಸಿದ್ದಾನೆ. ಇದರಿಂದ ಅಪಘಾತಕ್ಕೀಡಗಿದ್ದ ಕಾರು ಕಿಲೋ ಮೀಟರ್ ದೂರ ಎಳೆಯಲ್ಪಟ್ಟಿದೆ.
ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.



