ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ಶನಿವಾರ ಬೀದಿ ನಾಯಿಗಳ ಹಾವಳಿಗೆ ಬಾಲಕ ಮೃತಾಪಟ್ಟಿದ್ದಾನೆ.

ಕಸಬಾಲಿಂಗಸುಗೂರು ಗ್ರಾಮದ ಸಿದ್ದು ಬೀರಪ್ಪ ಗುಡಿಹಾಳ(5) ನಾಯಿಗಳ ದಾಳಿಯಿಂದ ಮೃತಪಟ್ಟ ಬಾಲಕ. ತಾಯಿ ಶೌಚಾಲಯಕ್ಕೆ ತೆರಳಿದ್ದಾರೆಂದು ಭಾವಿಸಿ ಸಿದ್ದು ಅಲ್ಲಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.
ಶೌಚಾಲಯದ ಹತ್ತಿರ ಮರಿಗಳಿಗೆ ಜನ್ಮ ನೀಡಿದ್ದ ನಾಯಿಯೊಂದು ಮಗುವನ್ನು ನೋಡಿ ಬೊಗಳಲು ಶುರು ಮಾಡಿದೆ. ಈ ವೇಳೆ ಹತ್ತಿರದಲ್ಲಿದ್ದ ನಾಯಿಗಳೆಲ್ಲಾ ದಾಳಿ ಮಾಡಲು ಮುಂದಾಗಿದೆ.
ಮಗು ಕಿರುಚುವುದನ್ನು ಕೇಳಿದ ಸ್ಥಳೀಯರು ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿದೆ.



