ಭಾರತೀಯ ಜನತಾ ಪಾರ್ಟಿ ಕೊಳವೂರು 2 ನೇ ವಾರ್ಡಿನ ಬೂತ್ ಸಮಿತಿಯು ಎಡಪದವು ಮಹಾಶಕ್ತಿ ಕೇಂದ್ರದ ಕಚೇರಿಯಲ್ಲಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಜಗದೀಶ್ ದುರ್ಗಾಕೊಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಸರ್ವ ಕಾರ್ಯಕರ್ತರ ಸಮ್ಮುಖದಲ್ಲಿ ಕೊಳವೂರು 2 ನೇ ವಾರ್ಡಿನ ಸಮಿತಿ ರಚಿಸಲಾಯಿತು . ಸಮಿತಿಯ ವಾರ್ಡಿನ ಅಧ್ಯಕ್ಷರಾಗಿ ದೀಕ್ಷಿತ್ ಆಚಾರ್ಯ , ಪ್ರಧಾನ ಕಾರ್ಯದರ್ಶಿ ಅಶ್ವಥ್ , ಕಾರ್ಯದರ್ಶಿಯಾಗಿ ರವಿಚಂದ್ರ , ಮತಗಟ್ಟೆ ಏಜೆಂಟ್ ಜಯ ಬಡಕಾಯಿಬೆಟ್ಟು , BLA 2 ರಮೇಶ್ , OBC ಸದಸ್ಯ ಲೋಕೇಶ್ , SC ಮೋರ್ಚಾ ಸದಸ್ಯ ಪ್ರವೀಣ , ST ಮೋರ್ಚಾ ಸದಸ್ಯ ದಾಮೋದರ ನಾಯ್ಕ್ , ಮಹಿಳಾ ಮೋರ್ಚಾದ ಸದಸ್ಯರು ಸುಚಿತ್ರ ಹಾಗೂ ಶಶಿಕಲಾ ಇವರು ಆಯ್ಕೆಯಾದರು .

ಈ ವೇಳೆ ಮಾತನಾಡಿದ ಎಡಪದವು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲ್ಯಾನ್ ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ನಾವೆಲ್ಲರೂ ಶ್ರಮಿಸಬೇಕಾಗಿದೆ , ಮುಂಬರುವ ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಆ ಮೂಲಕ ಪಕ್ಷಕ್ಕೆ ಶಕ್ತಿ ತುಂಬೋಣ ಎಂದರು . ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಮಾತನಾಡಿ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರಾದ ವೈ ಭರತ್ ಶೆಟ್ಟಿ ಹಾಗೂ ಕೊಳವೂರು ಭಾಗದ ಪಂಚಾಯತ್ ಸದಸ್ಯರ ನೆರವಿನಿಂದ ತುಂಬಾ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಅದನ್ನು ಸಾಮಾನ್ಯ ಜನರಿಗೆ ಮುಟ್ಟಿಸುವಂತ ಕೆಲಸವನ್ನು ಕಾರ್ಯಕರ್ತರಾದ ನಾವೆಲ್ಲರು ಮಾಡಬೇಕಾಗಿದೆ ಎಂದರು.
ಸದಸ್ಯರಾದ ಶಶಿಕಲಾ , ಕೊಳವೂರು ಶಕ್ತಿ ಕೇಂದ್ರದ ಪ್ರಮುಖರಾದ ಅಜಯ್ ಅಮೀನ್ , ಸದಾನಂದ ಶೆಟ್ಟಿ , ಉತ್ತರ ಮಂಡಲದ ಉಪಾಧ್ಯಕ್ಷರಾದ ಸಂತೋಷ್ ಕಂಗಿನಡಿ ಹಾಗೂ ಬಿಜೆಪಿ ಕಾರ್ಯಕರ್ತರಾದ ಹರ್ಷಿತ್ , ಲೋಕೇಶ್ , ದಿನೇಶ್ ರೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



