ದಕ್ಷಿಣ ಕನ್ನಡ : ಕರಾಡ ಬ್ರಾಹ್ಮಣ ಸುಧಾರಕ ಸಂಘ ಶ್ರೀನಿವಾಸಪುರ ಗುಂಡ್ಯಡ್ಕ ಮೂಡಬಿದಿರೆ ಇದರ ವತಿಯಿಂದ ಶೃಂಗೇರಿ ದರ್ಶನ ಹಾಗೂ ಗುರುಗಳ ಭೇಟಿ ಮತ್ತು ಮಂತ್ರಾಕ್ಷತೆ ಸ್ವೀಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವರ್ಷಂ ಪ್ರತಿಯಂತೆ ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ ಸಂದರ್ಭದಲ್ಲಿ ಕರಾಡ ಸಮಾಜದ ವತಿಯಿಂದ ಸಮಾಜ ಬಾಂಧವರಿಗಾಗಿ ಶೃಂಗೇರಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ ಸಮಾಜ ಬಾಂಧವರಿಗಾಗಿ ಏರ್ಪಡಿಸಲಾಗಿದ್ದ ಶೃಂಗೇರಿ ಪ್ರವಾಸದಲ್ಲಿ ಮಂಗಳೂರು, ಮೂಡಬಿದರೆ,ಉಡುಪಿ,ಮಣಿಪಾಲ, ಹಾಗೂ ಇತರರಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭಾಗವಹಿಸಿದ್ದು, ದೇವರ ದರ್ಶನವನ್ನು ಪಡೆದು ಜಗದ್ಗುರು ಭಾರತಿ ತೀರ್ಥ ಶ್ರೀಪಾದಂಗಳವರ ಶುಭಾಶೀರ್ವಾದದೊಂದಿಗೆ, ಜಗದ್ಗುರು ವಿದುಶೇಖರ ಭಾರತಿ ಮಹಾಸ್ವಾಮಿಗಳಿಂದ ಮಂತ್ರಾಕ್ಷತೆ ಪಡೆದು ಭಕ್ತರು ಪುನೀತರಾದರು,
ಇದೇ ಸಂದರ್ಭದಲ್ಲಿ ಕರಾಡ ಸಮಾಜ ಸುಧಾರಕ ಸಂಘ ಗುಂಡ್ಯಕ್ಕದ ವತಿಯಿಂದ ಗುರುಗಳ ಪಾದ ಪೂಜೆ ಹಾಗೂ ಗುರು ಕಾಣಿಕೆ ಸಮರ್ಪಿಸಲಾಯಿತು ಅಂತೆಯೇ ಯಾತರಾರ್ಥಿಗಳಿಗೂ ಪಾದ ಪೂಜೆಗೆ ಅವಕಾಶ ನೀಡಲಾಗಿತ್ತು, ಗುರುಗಳಿಂದ ಫಲಮಂತರಾಕ್ಷತೆ ಹಾಗೂ ಶಾರದೆಯ ಪ್ರಸಾದ ರೂಪದ ಪುಸ್ತಕವನ್ನು ಭಕ್ತರಿಗೆ ನೀಡಿ ಸಮಾಜ ಬಾಂಧವರನ್ನ ಆಶೀರ್ವದಿಸಿದರು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…